ಪೆರ್ಮುದೆ: ಈ ಹಿಂದೆ ಧರ್ಮತ್ತಡ್ಕದಲ್ಲಿ ಹೋಟೆಲ್ ನಡೆಸುತ್ತಿದ್ದ ಧರ್ಮತ್ತಡ್ಕ ನಿವಾಸಿ, ಹಿರಿಯ ಆರ್ಎಸ್ಎಸ್ ಕಾರ್ಯಕರ್ತ ಕರ್ವಜೆ ವಂಕಟರಮಣ ಭಟ್ (73) ನಿನ್ನೆ ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಹೋಟೆಲ್ ವೆಂಕಟ್ರಮಣ ಭಟ್ರು ಎಂದೆ ಪ್ರಚಾರದಲ್ಲಿದ್ದ ಇವರು ಪಾಕ ತಜ್ಞರಾಗಿದ್ದರು. ರುಚಿಕರ ಹೋಳಿಗೆ ತಯಾರಿಯಲ್ಲಿ ಸಿದ್ಧಹಸ್ತರಾಗಿದ್ದರು. ಮೃತರು ಪತ್ನಿ ದೇವಕಿ, ಪುತ್ರ ಗಣೇಶ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಯುವಕ ಸಂಘ ಧರ್ಮತ್ತಡ್ಕ ಸಂತಾಪ ಸೂಚಿಸಿದೆ.






