ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ವಿಷಯದಲ್ಲಿ ಸರಕಾರದ ನಿಲುವಿಗೆ ಹೊಂದಿಕೊಂಡು ಕ್ರಮ-ನೂತನ ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್  

ಕಾಸರಗೋಡು:  ಕಾಸರಗೋಡು  ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ವಿಷಯ ದಲ್ಲಿ  ಸರಕಾರದ ನಿಲುವಿಗೆ ಹೊಂದಿ ಕೊಂಡು ಮುಂದಿನ ಕ್ರಮ ಕೈಗೊಳ್ಳುವು ದಾಗಿ  ನೂತನ ಜಿಲ್ಲಾಧಿಕಾರಿಯಾಗಿ ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದ ಶ್ರೀಧನ್ಯಾಸುರೇಶ್ ಹೇಳಿದ್ದಾರೆ.

ಸಪ್ತಭಾಷಾ ಸಂಗಮ ಭೂಮಿ ಹಾಗೂ  ಕರ್ನಾಟಕ ಗಡಿಪ್ರದೇಶವನ್ನು ಹೊಂದಿರುವ ಕಾಸರಗೋಡು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸೇರಿದಂತೆ ಹಲವು ವಲಯಗಳಲ್ಲಿ ಭಾರೀ ಅಭಿವೃದ್ಧಿ ಯೋಜನೆಗಳ ಸಾಧ್ಯತೆ ಇದೆ. ಅದನ್ನೆಲ್ಲಾ ಕೂಲಂಕುಷವಾಗಿ ಪರಿಶೀಲಿಸಿ ಅಗತ್ಯದ ಅಭಿವೃದ್ಧಿ ಯೋಜನೆಗೆ ರೂಪು ನೀಡಲು ಪ್ರಯತ್ನಿಸಲಾಗು ವುದು.  ಇದಕ್ಕಾಗಿ ಕಾಸರಗೋಡಿನ  ಎಲ್ಲಾ ವಿಭಾಗದವರ ಪೂರ್ಣ ಸಹಕಾರವನ್ನು ನಾನು ಬಯಸುವುದಾಗಿ ಅವರು ತಿಳಿಸಿದರು.

ಕಲೆಕ್ಟರೇಟ್ ಕಾನ್ಫರೆನ್ಸ್ ಹಾಲ್‌ನಲ್ಲಿ ಇಂದು ಬೆಳಿಗ್ಗೆ ನಡೆದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ  ಹಾಲಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್‌ರಿಂದ ಶ್ರೀಧನ್ಯಾ ಸುರೇಶ್ ಅಧಿಕಾರ ವಹಿಸಿ ಕೊಂಡರು. ಈ ಸಂದರ್ಭದಲ್ಲಿ ಕಂ ದಾಯ ಇಲಾಖೆ ಯ ಹಲವು ಉನ್ನತ ಅಧಿಕಾರಿಗಳು  ಉಪಸ್ಥಿತರಿದ್ದರು.

You cannot copy contents of this page