ಜಿಲ್ಲೆಯ ವಿಕೋಪ ನಿವಾರಣೆಯ ಚಟುವಟಿಕೆಗಳನ್ನು ಶೀಘ್ರವೇ ಪೂರ್ತಿಗೊಳಿಸಲು ಅವಲೋಕನ ಸಭೆಯಲ್ಲಿ ತೀರ್ಮಾನ

ಕಾಸರಗೋಡು: ಮಳೆಗಾಲದ ಪೂರ್ವಭಾವಿಯಾಗಿ ಜಿಲ್ಲೆಯ ದುರಂತ ನಿವಾರಣೆ ಚಟುವಟಿಕೆಗಳ ಸಿದ್ಧತೆ ಕ್ರಮಗಳನ್ನು ಶೀಘ್ರವೇ ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಆಬ್ರಹಾಂ ನುಡಿದರು. ಸ್ಥಳೀಯಾಡಳಿತ ಇಲಾಖೆ ಜೊಯಿಂಟ್ ಡೈರಕ್ಟರ್‌ರ ಕಾರ್ಯಾಲಯದಲ್ಲಿ ಜರಗಿದ ಅವಲೋಕನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಮಳೆಗಾಲಕ್ಕೆ ಮುಂಚಿತವಾಗಿ ಜಿಲ್ಲೆಯ ಎಲ್ಲಾ ವಿದ್ಯಾಲಯಗಳಲ್ಲೂ ಶುಚೀಕರಣ ಚಟುವಟಿಕೆಗಳು ನಡೆಸಬೇಕು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಲಯದಲ್ಲಿ ವೆಚ್ಚಮಾಡುವ ಫಂಡ್‌ಗಳ ವಿನಿಯೋಗ ಕಾಲ ವಿಳಂಬವಿಲ್ಲದೆ ದಕ್ಷತೆಯಿಂದ ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ನುಡಿದರು. ಜಿಲ್ಲೆಯಲ್ಲಿನ ಒಟ್ಟು ತ್ಯಾಜ್ಯವನ್ನು ನಿರ್ಮೂಲನೆ ಮಾಡಲು, ಕಟ್ಟಿ ನಿಂತಿರುವ ನೀರನ್ನು ಹರಿಯಬಿಡಲು ಹೆಚ್ಚಿನ ಗಮನ ಹರಿಸಬೇಕೆಂದು ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನುಡಿದರು. ಜಿಲ್ಲೆಯ ಮಳೆಗಾಲ ಶುಚೀಕರಣ ಚಟುವಟಿಕೆಗಳನ್ನು ಸಮಯಾನುಸಾರ ಪೂರ್ತಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಲಯದಲ್ಲಿ ಯೋಜನೆ ಜ್ಯಾರಿ ಸಂಬಂಧಿಸಿದ ವಿಷಯದಲ್ಲಿ ಜಿಲ್ಲಾ ಪ್ಲಾನಿಂಗ್ ಆಫೀಸರ್ ಟಿ. ರಾಜೇಶ್, ಎಲ್‌ಎಸ್‌ಜಿಡಿ ಜೊಯಿಂಟ್ ಡೈರೆಕ್ಟರ್ ಜೈಸನ್ ಮ್ಯಾಥ್ಯು ಮಾತನಾಡಿದರು. ವಿಕೋಪ ನಿವಾರಣಾ ವಿಭಾಗ ಅಧಿಕಾರಿ ಶಿಲ್ಪ ತರಗತಿ ನಡೆಸಿದರು. ಶುಚಿತ್ವ ಮಿಶನ್ ಕೋರ್ಡಿನೇಟರ್ ಪಿ. ಜಯನ್, ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಸಹಿತ ಹಲವರು ಭಾಗವಹಿಸಿದರು.

RELATED NEWS

You cannot copy contents of this page