ಎ. 29ರಂದು ಮಹಿಳಾ ಪ್ರತಿಭಟನಾ ರ‍್ಯಾಲಿ
ಕಾಸರಗೋಡು: ಸಂಸತ್‌ನಲ್ಲಿ ಅಂಗೀಕಾರಕ್ಕಾಗಿ ಮಂಡಿಸಲಾದ ಮಹಿಳಾ ಮೀಸಲಾತಿ ವಿಧೇಯಕ ವನ್ನು ವಿರೋಧಿಸಿ ಅದನ್ನು ಪರಾಭವಗೊ ಳಿಸಿದ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಟಿಎಂಸಿ, ಡಿಎಂಕೆ ಎಂಬೀ ಪಕ್ಷಗಳ ನಿಲುವು ಪ್ರತಿಭಟನಾರ್ಹ ವಾದುದೆಂದು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದ್ದಾರೆ.
ವಿರೋಧಪಕ್ಷಗಳು ದೇಶದ ಮಹಿಳಾ ಸಮೂಹದೊಂದಿಗೆ ತೋರುತ್ತಿರುವ ವಂಚನೆ ಹಾಗೂ ಮಹಿಳಾ ವಿರೋಧಿ ಮನೋಭಾವ ಇದರಿಂದ ಪ್ರಕಟಗೊಂಡಿದೆ. ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರಗೊ ಳ್ಳುತ್ತಿದ್ದಲ್ಲಿ ಅದು ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲುಗೊಳ್ಳುತ್ತಿತ್ತು. ಆದರೆ ಅದರ ಬದಲು ಸಂಸತ್‌ನ ಒಳಗೆ ಹಾಗೂ ಹೊರಗೆ ದೇಶದ್ರೋಹ ಹಾಗೂ ಮಹಿಳಾ ವಿರೋಧಿ ಪರಾಮರ್ಶೆಗಳನ್ನು ವಿರೋಧಪಕ್ಷಗಳು ನಡೆಸಿದ್ದವು.
ಕಾಶ್ಮೀರದಲ್ಲಿ ಉಗ್ರಗಾಮಿಗಳ ವಿರುದ್ಧ ಭಾರತೀಯ ಸೇನೆ ನಡೆಸಿದ ಆಪರೇಶನ್ ಸಿಂಧೂರ್ ಕಾರ್ಯಾಚರಣೆ ಒಂದು ಇಂದ್ರಜಾಲವಾಗಿತ್ತೆಂದು ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಯ ಹೇಳಿಕೆ, ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಲ್ಪಟ್ಟಲ್ಲಿ ದೇಶದ ಪ್ರಜಾತಂತ್ರ ವ್ಯವಸ್ಥೆ ಕೊನೆಗೊಳ್ಳಲಿದೆ ಯೆಂಬ ರೀತಿಯ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿಕೆ ಹಾಗೂ ಇವರ ವಿಷಯದಲ್ಲಿ ಇತರ ವಿರೋಧ ಪಕ್ಷಗಳ ನಿಲುವು ಸಮಸ್ತ ಮಹಿಳಾ ಸಮಾಜವನ್ನೇ ವಿರೋಧಿಸು ವಂತದ್ದಾಗಿದೆ. ಈ ಮಸೂದೆ ಅಂಗೀಕರಿ ಸಲ್ಪಡುತ್ತಿದ್ದಲ್ಲ 2029ರ ಲೋಕಸಭಾ ಚುನಾವಣೆ ವೇಳೆ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಖಾತರಿಗೊ ಳ್ಳುತ್ತಿತ್ತು. ಶೇ. 100ರಷ್ಟು ಸಾಕ್ಷರತೆ ಹೊಂದಿರುವ ರಾಜ್ಯವಾಗಿರುವ ಕೇರಳ ದಲ್ಲಿ ಈತನಕ ಯಾರೂ ಮಹಿಳಾ ಮುಖ್ಯಮಂತ್ರಿ ಆಗಿಲ್ಲ. ಕೇರಳವನ್ನು ಅದಲು ಬದಲಾಗಿ ಆಡಳಿತ ನಡೆಸಿದ ಎಡರಂಗ ಮತ್ತು ಐಕ್ಯರಂಗದ ಮಹಿಳಾ ವಿರೋಧಿ ನಿಲುವಿಗೆ ಒಂದು ಸ್ಪಷ್ಟ ಉದಾಹರಣೆ ಇದಾಗಿದೆಯೆಂದು ಅಶ್ವಿನಿ ಹೇಳಿದ್ದಾರೆ. ವಿಪಕ್ಷಗಳ ಮಹಿಳಾ ಮೀಸಲಾತಿ ಮಸೂದೆ ವಿರೋಧಿ ನೀತಿಯನ್ನು ಪ್ರತಿಭಟಿಸಿ ಬಿಜೆಪಿ ಈ ತಿಂಗಳ 29ರಂದು ಜಿಲ್ಲೆಯಲ್ಲಿ ರ‍್ಯಾಲಿ ನಡೆಸಲು ತೀರ್ಮಾನಿಸಿದೆ. ಇದರಂಗ ವಾಗಿ ಬುದ್ಧಿಜೀವಿಗಳನ್ನು ಸಂಪರ್ಕಿಸು ವಿಕೆ, ಗೃಹ ಸಂದರ್ಶನ, ರಾಜಕೀಯ ಪಕ್ಷಗಳ ಮಹಿಳಾ ನೇತಾರರನ್ನು ಸಂಪ ರ್ಕಿಸುವ ಅಭಿಯಾನವನ್ನು ನಡೆಸುವ ತೀರ್ಮಾನವನ್ನು ಬಿಜೆಪಿ ಕೈಗೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ ಸವಿತಾ ಟೀಚರ್, ಎಂ. ಜನನಿ, ಅಶ್ವಿನಿ ಕೆ.ಎಂ, ಯಶೋಧಾ ಎನ್, ವೀಣಾ ಅರುಣ್ ಕುಮಾರ್ ಶೆಟ್ಟಿ, ಕೆ.ಎಸ್. ರಮಣಿ, ಪ್ರೇಮಲತಾ ಎಸ್, ಅನಿತಾ ನಾಯ್ಕ್, ಪುಷ್ಪಾ ಗೋಪಾಲನ್ ಮೊದಲಾದವರು ಭಾಗವಹಿಸಿದರು.






