ಹದಗೆಟ್ಟು ಸಂಚಾರ ಸಮಸ್ಯೆಯಿಂದ ಕೂಡಿದ  ಕೋಡಿಬೈಲು ರಸ್ತೆ ದುರಸ್ತಿಗೆ ಆಗ್ರಹ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕೋಡಿಬೈಲುನಲ್ಲಿ ಸಂಗಮ ರಸ್ತೆ ಹದಗೆಟ್ಟು ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಮಣ್ಣಂಗುಳಿಯಿAದ ಕೋಡಿಬೈಲು ಹಾಗೂ ಉಪ್ಪಳ ಪತ್ವಾಡಿ ರಸ್ತೆಯಿಂದ ಕೋಡಿಬೈಲು ಪ್ರದೇಶಕ್ಕೆ ಸಾಗುವ ರಸ್ತೆಗಳು ಶೋಚನೀಯವಾಗಿವೆ.
ಈ ಪ್ರದೇಶದಲ್ಲಿ ನೂರಾರು ಮನೆಗಳು, ಶಾಲೆ ಇದ್ದು, ನೂರಾರು ವಾಹನಗಳು ದಿನನಿತ್ಯ ಸಂಚರಿಸುತ್ತಿವೆ. ಅಲ್ಲಲ್ಲಿ ಡಾಮಾರೀಕರಣ, ಕಾಂಕ್ರಿಟ್, ಇಂಟರ್‌ಲಾಕ್ ಹಾಕಲಾಗಿದ್ದು, ಇವುಗಳೆಲ್ಲ ಹೊಂಡಗಳಿAದ ಕೂಡಿ ಸಂಚಾರ ದುಸ್ತರವಾಗಿದೆ. ಹದಗೆಟ್ಟ ರಸ್ತೆಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page