ಡೆಂಗ್ಯು ಜ್ವರ: ಕಾರಡ್ಕ ನಿವಾಸಿ ನಿಧನ

ಮುಳ್ಳೇರಿಯ: ಕಾರಡ್ಕ ಮುಂಡೋಳು ಜಂಕ್ಷನ್‌ನಲ್ಲಿ  ಈ ಮೊದಲು ಆಟೋ ಚಾಲಕನಾಗಿದ್ದು, ಈಗ ಬೆಂಗಳೂರಿನ ಕಂಪೆನಿ ಯೊಂದರ ವಾಹನದಲ್ಲಿ ಚಾಲಕ ನಾಗಿ ದುಡಿಯುತ್ತಿದ್ದ ಪ್ರಭಾಕರನ್ (52) ನಿಧನ ಹೊಂದಿದರು. ಬೆಂಗಳೂರಿನಲ್ಲಿ ಜ್ವರ ತಗಲಿದ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಅವರನ್ನು ಊರಿಗೆ ಕರೆದುಕೊಂಡು ಬರಲಾಗಿತ್ತು. ನಿನ್ನೆ ಸಂಜೆ ನಿಧನ ಸಂಭವಿಸಿದೆ. ಮುಳ್ಳೇರಿಯ ನಿವಾಸಿಯಾದ ಇವರು ಮೂಡಾಂಕುಳಂ ಪತ್ನಿ ಮನೆಯಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಪ್ರಭಾ, ಮಕ್ಕಳಾದ ಅನಘ, ಅನುನಂದ್, ಸಹೋದರರಾದ ಬಾಲಕೃಷ್ಣನ್, ನಾರಾಯಣನ್, ಕುಂಞಂಬು, ಸಹೋದರಿಯರಾದ ಕಮಲಾಕ್ಷಿ, ಭವಾನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಂದೆ ಕೃಷ್ಣನ್ ನಾಯರ್, ತಾಯಿ ನಾರಾಯಣಿ, ಸಹೋದರಿ ಬೇಬಿ, ಸಹೋದರ ತಂಬಾನ್ ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page