ಕಾಸರಗೋಡು: ಜಿಲ್ಲೆಯ ಐದು ವಿಧಾನಸಭಾ ಮಂಡಲಗಳ ವಿಜೇತ ಅಭ್ಯರ್ಥಿಗಳು ಹಾಗೂ ವಿವಿಧ ಅಭ್ಯರ್ಥಿಗಳಿಗೆ ಲಭಿಸಿದ ಮತಗಳ ವಿವರ.
ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್‌ನ ಶಾಸಕ ಎಕೆಎಂ ಅಶ್ರಫ್ ಜಯ ಗಳಿಸಿದ್ದು 96,948 ಮತ ಇವರಿಗೆ ಲಭಿಸಿದೆ. 29,252 ಮತಗಳ ಅಂತರದಿAದ ಜಯ ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್- 67,696, ಸಿಪಿಎಂನ ಕೆ.ಆರ್. ಜಯಾನಂದ -21,212, ಬಹುಜನ ಸಮಾಜ್ ಪಾರ್ಟಿ ಅಭ್ಯರ್ಥಿ ಸಂಜೀವ- 212, ಸ್ವತಂತ್ರ ಅಭ್ಯರ್ಥಿಗಳಾದ ಜೀನ್ ಲವೀನಾ ಮೊಂತೇರೊ- 523, ಕಣ್ಣೂರು ಅಬ್ದುಲ್ಲ ಮಾಸ್ತರ್ – 285, ಡಿ. ಸುರೇಂದ್ರನ್ ನಾಯರ್- 203, ಅಬ್ದುಲ್ ಲತೀಫ್- 79, ಮೊಹಮ್ಮದ್ ಅಶ್ರಫ್- 78, ಮೊಹಮ್ಮದ್ ಅಶ್ರಫ್ ಕೆ.ಎ- 64, ಜೋನ್ ಡಿಸೋಜ- 46, ನೋಟ- 455.
ಕಾಸರಗೋಡು ವಿಧಾನಸಭಾ ಮಂಡಲದಲ್ಲಿ ಮುಸ್ಲಿಂ ಲೀಗ್‌ನ ಅಭ್ಯರ್ಥಿ ಕಲ್ಲಟ್ರ ಮಾಹಿನ್‌ರಿಗೆ 76,396 ಮತಗಳು ಲಭಿಸಿದ್ದು, 22,698 ಮತಗಳ ಬಹುಮತವಿದೆ. ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂ.ಎಲ್- 53,698, ಸ್ವತಂತ್ರ ಅಭ್ಯರ್ಥಿಗಳಾದ ಶಾನವಾಸ್ ಪಾದೂರು- 36,678, ಶಾನವಾಸ್ ಎ.ಎ.-893, ಮೊಹಮ್ಮದ್ ಅಲಿ ಫತಾಹ್ ಬಿ.ಎಂ. -824, ನೋಟ- 714.
ಉದುಮ ವಿಧಾನಸಭಾ ಮಂಡಲದಲ್ಲಿ ಇಂಡ್ಯನ್ ನ್ಯಾಷನಲ್ ಕಾಂಗ್ರೆಸ್ ಅಭ್ಯರ್ಥಿ ನೀಲಕಂಠನ್ 78,910 ಮತ ಗಳಿಸಿ 4847 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಶಾಸಕ ಸಿಪಿಎಂನ ಸಿ.ಎಚ್. ಕುಂಞAಬು- 74,063, ಬಿಜೆಪಿ ಅಭ್ಯರ್ಥಿ ಎಂ. ಮನುಲಾಲ್- 26,899, ಸ್ವತಂತ್ರ ಅಭ್ಯರ್ಥಿಗಳಾದ ಕುಂಞAಬು ಪಿ.ಪಿ.- 191, ಕುಂuಟಿಜeಜಿiಟಿeಜರಾಮ- 138, ನಸೀರ್- 111, ನೋಟ- 504.
ಕಾಞಂಗಾಡ್ ವಿಧಾನಸಭಾ ಮಂಡಲದಲ್ಲಿ ಸಿಪಿಐ ಅಭ್ಯರ್ಥಿ ನ್ಯಾಯವಾದಿ ಗೋವಿಂದನ್ ಪಳ್ಳಿಕಾಪಿಲ್ 15,316 ಮತಗಳ ಬಹುಮತದಿಂದ ಜಯಗಳಿಸಿದ್ದು, ಇವರಿಗೆ 79,920 ಮತ ಲಭಿಸಿದೆ. ಕೇರಳ ಕಾಂಗ್ರೆಸ್ ಅಭ್ಯರ್ಥಿ ಶೈಜಿ ಓಟಪ್ಪಳ್ಳಿ- 64,604, ಬಿಜೆಪಿ ಅಭ್ಯರ್ಥಿ ಎಂ. ಬಲ್‌ರಾಜ್- 27,063, ಬಹುಜನ ಸಮಾಜ್ ಪಾರ್ಟಿ ಅಭ್ಯರ್ಥಿ ಬಿ. ವಿಜಯ ಕುಮಾರ್- 3132, ನೋಟ- 1058.
ತೃಕ್ಕರಿಪುರ ವಿಧಾನಸಭಾ ಮಂಡಲದಲ್ಲಿ ಇಂಡ್ಯನ್ ನ್ಯಾಷನಲ್ ಕಾಂಗ್ರೆಸ್‌ನ ಸಂದೀಪ್ ವಾರ್ಯರ್ 4431 ಮತಗಳ ಬಹುಮತದಿಂದ ಜಯ ಗಳಿಸಿದ್ದು, 83,109 ಮತ ಪಡೆದಿದ್ದಾರೆ. ಸಿಪಿಎಂನ ಡಾ. ವಿ.ಪಿ.ಪಿ ಮುಸ್ತಫ 78,678, ಟ್ವೆಂಟಿ ಟ್ವೆಂಟಿ ಅಭ್ಯರ್ಥಿ ರವಿ ಕುಳಂಗರ- 7837, ಸ್ವತಂತ್ರ ಅಭ್ಯರ್ಥಿಗಳಾದ ಸಂದೀಪ್ ಎಳಾಟ್- 258, ಮುಸ್ತಫ ಪಿ.ಪಿ.- 169, ಮುಸ್ತಫ ಪಿ.ವಿ- 143, ನೋಟ- 710.
ವಿಧಾನಸಭಾ ಮಂಡಲಗಳ ವಿಜೇತರಿಗೆ ಚುನಾವಣಾಧಿಕಾರಿ ಪ್ರಮಾಣಪತ್ರ ವಿತರಿಸಿದರು. ಎಕೆಎಂ ಅಶ್ರಫ್‌ರಿಗೆ ಮಂಜೇಶ್ವರ ಮಂಡಲದ ಚುನಾವಣಾಧಿಕಾರಿ ಡೆಪ್ಯುಟಿ ಕಲೆಕ್ಟರ್ ವಿ.ಪಿ. ರಘುಮಣಿ ಪ್ರಮಾಣಪತ್ರ ನೀಡಿದ್ದಾರೆ. ಕಲ್ಲಟ್ರ ಮಾಹಿನ್‌ರವರಿಗೆ ಕಾಸರಗೋಡು ಆರ್‌ಡಿಒ ಬಿನು ಜೋಸೆಫ್, ಉದುಮದಲ್ಲಿ ಜಯ ಗಳಿಸಿದ ನೀಲಕಂಠನ್‌ರಿಗೆ ಡೆಪ್ಯುಟಿ ಕಲೆಕ್ಟರ್ ಲಿಪು ಎಸ್. ಲಾರೆನ್ಸ್ ಪ್ರಮಾಣ ಪತ್ರ ವಿತರಿಸಿದರು. ಕಾಞಂಗಾಡ್ ವಿಧಾನಸಭಾ ಮಂಡಲದ ಗೋವಿಂದನ್ ಪಳ್ಳಿಕಾಪಿಲ್‌ರಿಗೆ ಕಾಞಂಗಾಡ್ ಆರ್‌ಡಿಒ ಆರ್. ಮನೋಜ್, ತೃಕ್ಕರಿಪುರ ಮಂಡಲದ ಸಂದೀಪ್ ವಾರ್ಯರ್‌ಗೆ ಡೆಪ್ಯುಟಿ ಕಲೆಕ್ಟರ್ ವಿ.ಇ. ಶೆರ್ಲಿ ಪ್ರಮಾಣಪತ್ರ ನೀಡಿದರು.






