ಗಲ್ಫ್‌ನಲ್ಲಿ ಕುಸಿದುಬಿದ್ದು ಮೃತ್ಯು

ಬದಿಯಡ್ಕ:  ವ್ಯಕ್ತಿಯೊಬ್ಬರು  ಗಲ್ಫ್‌ನಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ.    ಬದಿಯಡ್ಕ ಬಳಿಯ ಕನಕಪ್ಪಾಡಿ ನಿವಾಸಿಯೂ ಪ್ರಸ್ತುತ ತೊಕ್ಕೋಟಿನಲ್ಲಿ ವಾಸಿಸುತ್ತಿದ್ದ ಹೆನ್ರಿ ಡಿ’ಸೋಜಾ (58) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಇವರು ಕಾಸರಗೋಡು-ಬದಿಯಡ್ಕ ರೂಟ್‌ನಲ್ಲಿ ಸಂಚರಿ ಸುವ ಖಾಸಗಿ ಬಸ್ ಚಾಲಕನಾಗಿ ದ್ದರು. ಅನಂತರ ಉದ್ಯೋಗ ನಿಮಿತ್ತ ಗಲ್ಫ್‌ಗೆ ತೆರಳಿದ್ದರು. ನಿನ್ನೆ ಬೆಳಿಗ್ಗೆ ಇವರು  ಗಲ್ಫ್‌ನಲ್ಲಿ ಕುಸಿದು ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತದೇಹವನ್ನು ಊರಿಗೆ ತರಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ.  ಮೃತರು ಪತ್ನಿ ಸವಿತಾ, ಮಕ್ಕಳಾದ ಸೋನಲ್, ಸನುನ್, ಸಹೋದರ ವಿನ್ಸೆಂಟ್ ಡಿ’ಸೋಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page