ಕಿಳಿಂಗಾರು ಸಾಯಿರಾಂ ಭಟ್ ಕುಟುಂಬದಿಂದ ಧನಸಹಾಯ ವಿತರಣೆ

ಬದಿಯಡ್ಕ: ಕಿಳಿಂಗಾರು ದಿ| ಸಾಯಿರಾಂ ಭಟ್ ಕುಟುಂಬದ ವತಿಯಿಂದ ಬಡ ಜನತೆಗೆ ನೆರವು ಹಸ್ತಾಂತರ ನಡೆಯಿತು. ವೇದಮೂರ್ತಿ ಮಹಾಲಿಂಗೇಶ್ವರ ಉಪಾಧ್ಯಾಯ ಮಣಿಮುಂಡ, ವೇದಮೂರ್ತಿ ಗೋಪಾಲಕೃಷ್ಣ ಭಟ್ ಕಿಳಿಂಗಾರು ಸಹಾಯ ವಿತರಿಸಿದರು. ಸಾಯಿರಾಂ ಕೃಷ್ಣ ಭಟ್ ಪ್ರಾಸ್ತಾವಿಕ ಮಾತನಾಡಿದರು. ರಮೇಶ್ ಬೇರಿಕೆ ಅವರಿಗೆ  ಚಿಕಿತ್ಸಾ ಧನಸಹಾಯ, ಭವ್ಯ ಬಾಂಜತ್ತಡ್ಕ, ರಾಜೀವಿ ಬೇಳ, ನಾರಾಯಣ ಮಣಿಯಾಣಿ ಅವರಿಗೆ ಮನೆ ದುರಸ್ತಿಗೆ, ಯಶೋಧ ಬೇಳರಿಗೆ ಮದುವೆ ಧನಸಹಾಯ ನೀಡಲಾಯಿತು. ಪಂಚಾಯತ್ ಅಧ್ಯಕ್ಷ ಶಂಕರ ಡಿ, ಗೋಪಾಲಕೃಷ್ಣ ಭಟ್ ಅಡ್ಯನಡ್ಕ, ಸಂದೇಶ, ವೇಣುಗೋಪಾಲ ಕಿಳಿಂಗಾರು, ಸಂಜೀವ ರೈ ಉಪಸ್ಥಿತರಿದ್ದರು.

RELATED NEWS

You cannot copy contents of this page