ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ೫ನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಮೇ ೧೬ರಂದು ಕುಡಾಲುಮೆರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಪೂರ್ವಭಾವಿಯಾಗಿ ಸ್ವಾಗತ ಸಮಿತಿ ರಚನೆ ಸಭೆ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಜಿ.ಪಂ. ಸದಸ್ಯ ಸೋಮಶೇಖರ ಜೆ.ಎಸ್. ಉದ್ಘಾಟಿಸಿ ದರು. ಶಾಲಾ ವ್ಯವಸ್ಥಾಪಕ ಬಿ.ಎ. ಖಾದರ್ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಪಂಚಾಯತ್ ಸದಸ್ಯ ಬಿ.ಎ. ಬಶೀರ್ ಕೊಟ್ಟೂಡಲ್, ಪಂಚಾಯತ್ ಸದಸ್ಯರಾದ ಶಶಿಕಲಾ ರೈ ಹಾಗೂ ಅಜೀಜ್ ಚೇವಾರ್, ಲಕ್ಷ್ಮಣ ಪ್ರಭು, ನ್ಯಾಯವಾದಿ ಥೋ ಮಸ್ ಡಿ ಸೋಜಾ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ರವಿ ನಾಯ್ಕಾಪು ಸ್ವಾಗತಿಸಿ, ಗೌರವಾಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ಪ್ರಾಸ್ತಾವಿಕ ಭಾಷಣ ಮಾಡಿದರು.ಉತ್ಸವದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಬಿ.ಎ. ಖಾದರ್ ಹಾಜಿ, ಅಧ್ಯಕ್ಷರಾಗಿ ಸೋಮಶೇಖರ ಜೆ.ಎಸ್., ಉಪಾಧ್ಯಕ್ಷ ರಾಗಿ ಬಿ.ಎ. ಬಶೀರ್, ಪ್ರಧಾನ ಸಂಚಾಲಕರಾಗಿ ಅಶೋಕ ಭಂಡಾರಿ ಆಯ್ಕೆಯಾದರು. ಸಂಚಾಲಕರಾಗಿ ಮುಹಮ್ಮದಲಿ ಬಿ.ಕೆ. ಹಾಗೂ ಬಿ.ಎ. ಅಬ್ದುಲ್ ಲತೀಫ್, ಕೋಶಾಧಿಕಾರಿ ಯಾಗಿ ಶ್ರೀಕಾಂತ್ ನೆಟ್ಟಣಿಗೆ ನೇಮಕ ಗೊಂಡರು.
ವಿವಿಧ ಉಪಸಮಿತಿಗಳಿಗೆ ಹಣಕಾಸು: ರಾಘವ ಚೇರಾಲ್ (ಅಧ್ಯಕ್ಷ),ಎ.ಆರ್. ಸುಬ್ಬಯ್ಯಕಟ್ಟೆ (ಸಂಚಾಲಕ), ಆಹಾರ: ಶಶಿಕಲಾ ರೈ (ಅಧ್ಯಕ್ಷೆ), ಮುಹಮ್ಮದ್ ಕುಂಞ, ನಳಿನಾಕ್ಷಿ, ಪುಷ್ಪಾ (ಸಂಚಾಲಕಿಯರು), ಸಾಂಸ್ಕೃತಿಕ: ಸುಭಾಶ್ ಪೆರ್ಲ (ಅಧ್ಯಕ್ಷ ), ಎಸ್.ಕೆ. ಬಾಲಕೃಷ್ಣ (ಸಂಚಾಲಕ), ವೇದಿಕೆ: ರವಿ ನಾಯ್ಕಾಪು (ಅಧ್ಯಕ್ಷ), ರಾಧಾಕೃಷ್ಣ ಉಳಿಯತ್ತಡ್ಕ (ಸಂಚಾಲಕ), ಮೆರವಣಿಗೆ : ಖಲೀಲ್ ಕೆ.ಕೆ.ಎಸ್ (ಅಧ್ಯಕ್ಷ), ಅಬ್ಬಾಸ್, ಅಶ್ರಫ್ ಸುಬ್ಬಯ್ಯಕಟ್ಟೆ, ಬಾಪಕುಞ ಕುಡಾಲ್ (ಸಂಚಾಲ ಕರು), ಅಲಂಕಾರ: ಮನಾಫ್ ಸುಬ್ಬಯ್ಯಕಟ್ಟೆ (ಅಧ್ಯಕ್ಷ), ಆನಂದ ಲಂಕಿನಡ್ಕ, ಎಸ್.ಕೆ. ಚಂದ್ರಶೇಖರ (ಸಂಚಾಲಕರು) ಆಯೆಯಾದರು. ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಿರಿಯ ಸಾಧಕ ಪತ್ರಕರ್ತರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ನಡೆಯಲಿದೆ.






