ತಮ್ಮನ ತಮ್ಮನ ಮರಣಾನಂತರ ಕ್ರಿಯೆಗಳ ಮಧ್ಯೆ ಕುಸಿದು ಬಿದ್ದ ಅಣ್ಣ

ಕಾಸರಗೋಡು: ಸಹೋದರನ ಮರಣಾನಂತರ ಕಾರ್ಯಕ್ರಮದ ಮಧ್ಯೆ ಕುಸಿದು ಬಿದ್ದ ಅಣ್ಣ ನಿಧನ ಹೊಂದಿದರು. ತೃಕರಿಪುರ ಆಯಿಟ್ಟಿ ನಗರ ನಿವಾಸಿ ಎಂ. ಲಕ್ಷ್ಮಣನ್ (68) ಮೃತಪಟ್ಟವರು. ತಮ್ಮ ಎಂ. ಗೋಪಾಲನ್ ನಿಧನ ಹೊಂದಿದ ಹಿನ್ನೆಲೆಯಲ್ಲಿ 12ನೇ ದಿನದ ಮರಣಾನಂತರ ಕ್ರಿಯೆಗಳಿಗಾಗಿ ತೃಕ್ಕನ್ನಾಡ್ ಕ್ಷೇತ್ರಕ್ಕೆ ತಲುಪಿದ್ದರು. ಕ್ಷೇತ್ರದಲ್ಲಿ ಹೊರಗೆ ನಡೆಯುತ್ತಿದ್ದ ಕ್ರಿಯೆಗಳ ಮಧ್ಯೆ ಲಕ್ಷ್ಮಣನ್ ಕುಸಿದು ಬಿದ್ದಿದ್ದರು. ಕೂಡಲೇ ಇವರನ್ನು ಪಾಲಕುನ್ನುನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಮೃತರು ಪತ್ನಿ ಪಿ. ಸರಸ್ವತಿ, ಮಕ್ಕ ಳಾದ ಪಿ. ಲಜಿನ, ಅಳಿಯ ಇ. ಶಾಜಿ, ಸೊಸೆ ಲಯನ, ಓರ್ವೆ ಸಹೋ ದರಿ ಎಂ. ದೇವಕಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ಲತೀಶ್, ಇತರ ಸಹೋದರರಾದ ಶ್ರೀಧರನ್, ಗೋಪಾ ಲನ್, ಸಹೋದರಿ ಕಾರ್ತ್ಯಾಯಿನಿ ಈ ಹಿಂದೆ ನಿಧನ ಹೊಂದಿದ್ದಾರೆ.

You cannot copy contents of this page