ಸುಡು ಬಿಸಿಲನ್ನೂ ಲೆಕ್ಕಿಸದೆ ಮುಂದುವರಿಯುತ್ತಿರುವ ಬಿರುಸಿನ ಚುನಾವಣಾ ಪ್ರಚಾರ

ಕಾಸರಗೋಡು: ವಿಧಾನಸಭಾ ಚುನಾವಣೆಗೆ ಇನ್ನು ಏಳು ದಿನಗಳು ಮಾತ್ರ  ಬಾಕಿ ಉಳಿದುಕೊಂಡಿ ರುವಂತೆ ಮತ ಯಾಚನೆಗಾಗಿರುವ ಅಭ್ಯರ್ಥಿಗಳ ಪ್ರಚಾರ ಪರ್ಯಟನೆ ಬೇಸಿಗೆಯ ಸುಡು ಬಿಸಿಲನ್ನು ಲೆಕ್ಕಿಸದೆ ಇನ್ನಷ್ಟು ಆವೇಶಭರಿತವಾದ ರೀತಿಯಲ್ಲಿ ಮುಂದಕ್ಕೆ ಸಾಗುತ್ತಿದೆ.ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ನಿನ್ನೆ ಕುಟುಂಬ ಸಭೆಗಳನ್ನು ಕೇಂದ್ರೀಕರಿಸಿ ಪ್ರಚಾರ ನಡೆಸಿದರು. ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತ ವಿಘ್ನೇಶ್ವರ ಭಟ್ ಮತ್ತು  ಕುಟುಂಬವನ್ನು ಪೆರ್ಣೆಯಲ್ಲಿರುವ ಅವರ ಮನೆಯಲ್ಲಿ ಸಂದರ್ಶಿಸಿ ಮತ ಯಾಚನೆ ನಡೆಸಿದರು. ನಂತರ ಅವರು ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ನಿನ್ನೆ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಭೇಟಿ ನೀಡಿದರು. ಅನಂತರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆಯವರ ನೇತೃತ್ವದಲ್ಲಿ ನಡೆದ ಚುನಾವಣಾ ಅವಲೋಕನಾ ಸಭೆಯಲ್ಲಿ ಭಾಗವಹಿ ಸಿದರು. ಸಂಜೆ ಮೊಗ್ರಾಲ್ ಪುತ್ತೂರು ಪಂಚಾಯತ್ ನ ಕೆ.ಕೆ.ಪುರಂ ಕುಟುಂಬ ಸಭೆಯಲ್ಲಿ  ಭಾಗವಹಿಸಿದರು. ಬಳಿಕ ಆದೂರು ಮಲ್ಲಾವರ ಶ್ರೀ ಪಂಚಲಿಂ ಗೇಶ್ವರ ದೇವಸ್ಥಾನ, ಮಾರ್ಪನಡ್ಕದಲ್ಲಿರುವ ಹಲವು ಮನೆಗಳನ್ನು ಸಂದರ್ಶಿಸಿದರು.  ಬಿಜೆಪಿಯ ಹಲವು ನೇತಾರರು ಈವೇಳೆ ಅಶ್ವಿನಿ ಜತೆಗಿದ್ದರು.

ಎಡರಂಗ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಶಾನವಾಸ್ ಪಾದೂರು ನಿನ್ನೆ ಚೆಂಗಳ ಪಂಚಾಯತ್‌ನಲ್ಲಿ ಪರ್ಯಟನೆ ನಡೆಸಿದರು. ಚೆಂಬಕಂ ಪೂಕುನ್ನಿಡಂ ಚಾರಿಟೇಬಲ್ ಆಂಡ್ ಕಲ್ಚರಲ್ ಫಾರಂ ನಿರ್ಮಿಸಿ ನೀಡುವ ಎರಡನೇ ಮನೆಯಾದ ಚೆಂಬಕಂ ತಣಲ್-೨ರ ಚಾತ್ತಪ್ಪಾಡಿಯಲ್ಲಿ ಶಿಲಾನ್ಯಾಸ  ನಿರ್ವಹಿಸಿದರು. ಬಳಿಕ ಅವರು ಪರ್ಯಟನೆ ಆರಂಭಿಸಿದರು.ಅಲ್ಲೂ ಅವರಿಗೆ ಜನರಿಂದ ಭಾರೀ  ಸ್ವಾಗತ ಲಭಿಸಿತು. ಅಲ್ಲಿಂದ ಆರಂಭಿಸಿದ ಪರ್ಯಟನೆ ಚೆರ್ಕಳ ತನಕ ಮುಂದುವರಿಯಿತು. ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಶಾನವಾಸ್ ಪಾದೂರುರೊಂದಿಗೆ ಚುನಾವಣಾ ಪರ್ಯಟನೆಯಲ್ಲಿ ಪಾಲ್ಗೊಂಡರು.  ಚಾತಪ್ಪಾಡಿ, ನೆಲ್ಲಿಕಟ್ಟೆ, ಅದ್ರುಕುಳಿ, ಬಾಲಡ್ಕ, ಎದುರ್ತೋಡು, ಎಡನೀರು, ಪಾಡಿ, ನಾಲತ್ತಡ್ಕ, ಕಲ್ಲಕಟ್ಟ, ಎರುದುಂಕಡವು, ಪುದುಮಣ್,  ಪನ್ನಿಪ್ಪಾರ, ಆಲಂಪಾಡಿ, ರಹ್ಮಾನಿಯಾನಗರ, ನಾಯಮ್ಮಾರಮೂಲೆ, ಫಿರ್ದೋಸ್‌ನಗರ, ನಾಲ್ಕನೇಮೈಲು, ಚೇರೂರು, ಚೆರ್ಕಳ, ಸ್ಟಾರ್‌ನಗರ, ವಿ.ಕೆ.ಪಾರ, ಪುಲಿಕುಂಡು ಎಂಬಿಡೆಗಳಲ್ಲಿ ಪರ್ಯಟನೆ ಮುಂದು ವರಿದು ಚೆರ್ಕಳದಲ್ಲಿ ಕೊನೆಗೊಂಡಿತು.  ಈ ವೇಳೆ ಶಾನವಾಸ್ ಪಾದೂರು ಹಲವು ಶಾಲೆಗಳನ್ನು ಸಂದರ್ಶಿಸಿದರು.

ಯುಡಿಎಫ್ ಅಭ್ಯರ್ಥಿ ಕಲ್ಲಟ್ರ ಮಾಹಿನ್ ನಿನ್ನೆ ತನ್ನ  ಮೂರನೇ ಹಂತದ ಪರ್ಯಟನೆಯನ್ನು ಬೆಳ್ಳೂರು ಪಂಚಾಯತ್‌ನಿಂದ ಆರಂಭಿಸಿದರು. ಕಿನ್ನಿಂಗಾರಿನಲ್ಲಿ ನಡೆದ ಕಾರ್ನರ್ ಸಭೆಯಲ್ಲಿ ಅವರು ಭಾಗವಹಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಸಭೆಯನ್ನು ಉದ್ಘಾಟಿಸಿದರು. ಚುನಾವಣಾ ಸಮಿತಿ ಅಧ್ಯಕ್ಷ ಗೋವಿಂದನ್ ನಾಯರ್ ಅಧ್ಯಕ್ಷತೆ ವಹಿಸಿದರು. ಶಾಸಕ ಎನ್.ಎ ನೆಲ್ಲಿಕುನ್ನು, ಮಾಹಿನ್ ಕೇಳೋಟ್, ವಿ.ಎಂ. ಮುನೀರ್ ಹಾಜಿ, ಕಲ್ಲಗ ಚಂದ್ರಶೇಖರ ರಾವ್, ಕೆ. ಖಾಲಿದ್, ಟಿ.ಎಂ. ಇಕ್ಭಾಲ್, ಕೆ. ವಾರಿಜಾಕ್ಷನ್,ಅಶ್ರಫ್ ಎಡನೀರು, ಎಂ. ರಾಜೀವನ್ ನಂಬ್ಯಾರ್, ಕೆ.ಅಬ್ದುಲ್ಲ ಮೊದಲಾದವರು ಮಾತನಾಡಿದರು. ನಂತರ ಅಲ್ಲಿಂದ ವಿವಿಧೆಡೆಗಳಲ್ಲಿ ಪರ್ಯಟನೆ ನಡೆಸಿದ ಬಳಿ ಮಾರ್ಪನಡ್ಕದಲ್ಲಿ ಸಮಾಪ್ತಿಗೊಂಡಿತು. ಈ ಮೂರೂ ಒಕ್ಕೂಟಗಳ ಅಭ್ಯರ್ಥಿಗಳ  ಪರ್ಯಟನೆ ಇಂದೂ ಮುಂದುರಿಯುತ್ತಿದೆ.

You cannot copy contents of this page