ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೋಲಿಂಗ್ ಸ್ಟೇಷನ್‌ಗಳಾಗಿ ಕಾರ್ಯಾಚರಿಸುವ ಶಿಕ್ಷಣ ಸಂಸ್ಥೆಗಳಿಗೆ ಇಂದು, ನಾಳೆ ಮತ್ತು ಮತ ಎಣಿಕೆ ಕೇಂದ್ರಗಳಾಗಿ ಕಾರ್ಯಾಚರಿಸುವ ಶಿಕ್ಷಣ ಸಂಸ್ಥೆಗಳಿಗೆ 13ರಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ರಜೆ ಘೋಷಿಸಿದ್ದಾರೆ. ನಾಳೆ ಜಿಲ್ಲೆಯಲ್ಲಿ ಚುನಾವಣೆ ನಡೆಯುತ್ತಿದೆ. ಪೋಲಿಂಗ್ ಬೂತ್‌ಗಳಾಗಿ ಕಾರ್ಯಾಚರಿಸುವ 158 ಅಂಗನವಾಡಿಗಳಿಗೆ ರಜೆ ಅನ್ವಯವಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.







