ಬೇಕಲದಲ್ಲಿ ಸಂಗೀತ ಕಾರ್ಯಕ್ರಮ ವೇಳೆ ಇಂಜಿನಿಯರಿಂಗ್ ವಿದ್ಯಾರ್ಥಿ ರೈಲು ಢಿಕ್ಕಿ ಹೊಡೆದು ಮೃತ್ಯು

ಕಾಸರಗೋಡು: ಬೇಕಲ ಬೀಚ್ ಫೆಸ್ಟ್‌ನಲ್ಲಿ ನಿನ್ನೆ ರಾತ್ರಿ ನಡೆದ ವೇಡನ್‌ರ ಸಂಗೀತ ಕಾರ್ಯಕ್ರಮ ವೀಕ್ಷಿಸಲು ತಲು ಪಿದ ಇಂಜಿನಿಯರಿಂಗ್ ವಿದ್ಯಾ ರ್ಥಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪೊಯಿನಾಚಿ ಪರಂಬ್ ಶಿವಮಂ ಹೌಸ್‌ನ ವೇಣುಗೋಪಾಲನ್ ನಾಯರ್ ರ ಪುತ್ರ ಎಂ. ಶಿವನಂದನ್ (19) ಮೃತಪಟ್ಟ ದುರ್ದೈವಿ.  ಇವರು ಮಂಗಳೂರಿನಲ್ಲಿ ಇಂಜಿನಿ ಯರಿಂಗ್ ವಿದ್ಯಾರ್ಥಿಯಾಗಿದ್ದರು.

ನಿನ್ನೆ ರಾತ್ರಿ ೯ ಗಂಟೆ ವೇಳೆ ಘಟನೆ ನಡೆದಿದೆ. ನೆರೆಮನೆ ನಿವಾಸಿಯೂ, ಸ್ನೇಹಿತನೂ ಆದ ಪರಂಬ್ ಕುಂಡಡ್ಕ ಹೌಸ್‌ನ ಕೆ. ಅಜೇಶ್(೨೦)ರೊಂದಿಗೆ ಶಿವನಂದನ್ ಪಳ್ಳಿಕ್ಕೆರೆ ಬೀಚ್‌ಗೆ ನಡೆದು ಹೋಗುತ್ತ್ತಿದ್ದರು.  ರೈಲ್ವೇ ಹಳಿ ಸಮೀಪದಲ್ಲಾಗಿ ನಡೆದು ಹೋಗುತ್ತಿದ್ದಾಗ ಕಣ್ಣೂರು ಭಾಗದಿಂದ ಬಂದ ರೈಲು ಶಿವನಂದನ್‌ಗೆ ಢಿಕ್ಕಿ ಹೊq ದಿರುವುದಾಗಿ ಬೇಕಲ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.  ಸ್ನೇಹಿತನಾದ ಅಜೇಶ್‌ರ ದೂರಿನ ಪ್ರಕಾರ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ವೇಣುಗೋಪಾಲನ್ ನಾಯರ್-ಸ್ಮಿತಾ ದಂಪತಿಯ ಏಕ ಪುತ್ರನಾಗಿದ್ದಾರೆ ಶಿವನಂದನ್. ವಿದ್ಯಾರ್ಥಿಯ ಅಕಾಲಿಕ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ.

ಇದೇ ವೇಳೆ ವೇಡನ್‌ರ ಸಂಗೀತ ಕಾರ್ಯಕ್ರಮ ಸಂದರ್ಭ ದಲ್ಲಿ ಉಂಟಾದ ನೂಕುನುಗ್ಗಲು  ಭಾರೀ ಆತಂಕಕ್ಕೆ ಕಾರಣವಾಗಿತ್ತು.  ಉಸಿರಾಟ ಸಾಧ್ಯವಾಗದೆ ಹಲವರು ಕುಸಿದು ಬೀಳುವುದರೊಂದಿಗೆ ಆತಂಕ  ಹೆಚ್ಚಿತು.  ಬೇಕಲ ಬೀಚ್ ಫೆಸ್ಟ್‌ನಲ್ಲಿ ಉಂಟಾದ ನೂಕುನುಗ್ಗಲಿನಿಂದ ಆರು ಮಂದಿಗೆ ಮಾತ್ರವೇ ಉಸಿರಾಟ ಸಮಸ್ಯೆ ಉಂಟಾಗಿದೆಯೆಂದೂ ಇವರಿಗೆ ಅಗತ್ಯದ ವೈದ್ಯಕೀಯ ಸಹಾಯ ನೀಡಿದ ಬಳಿಕ ಬಿಡುಗಡೆಗೊಳಿಸಿರು ವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಬಿ.ವಿ. ವಿಜಯ ಭರತ್  ರೆಡ್ಡಿ ತಿಳಿಸಿದ್ದಾರೆ. ಸಾರ್ವಜನಿಕರು ಗೊಂದಲ ಸೃಷ್ಟಿಸಕೂಡದೆಂದೂ ಅವರು ತಿಳಿಸಿದ್ದಾರೆ.

You cannot copy contents of this page