ಪೈವಳಿಕೆ: ಖ್ಯಾತ ಯಕ್ಷಗಾನ ಕಲಾವಿದರಾಗಿದ್ದ ದಿ| ಕರುವೋಳು ದೇರಣ್ಣ ಶೆಟ್ಟಿಯವರ ಪತ್ನಿ ರಾಧಮ್ಮ (86) ನಿಧನ ಹೊಂದಿದರು. ಕೃಷಿಕೆಯಾ ಗಿದ್ದರು. ಮೃತರು ಮಕ್ಕಳಾದ ಯಶೋಧ, ವಿಶಾಲಾಕ್ಷಿ, ಸುಮತಿ, ದಿನೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ನಿಧನಕ್ಕೆ ಪೈವಳಿಕೆ ಸಿಪಿಎಂ ಲೋಕಲ್ ಸಮಿತಿ, ಶಿರಂತಡ್ಕ ಕಾಡೂರು ಕುರುಡಪದವು ಬ್ರಾಂಚ್ ಸಮಿತಿ, ಕಿಸಾನ್ ಸಭಾ, ಸಿಐಟಿಯು, ಮಹಿಳಾ ಅಸೋಸಿಯೇಶನ್, ಡಿವೈಎಫ್‌ಐ ಘಟಕಗಳು, ಲಕ್ಕಿ ಸ್ಟಾರ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಗೋಳಿಕಟ್ಟೆ ಸಂತಾಪ ಸೂಚಿಸಿದೆ. ಮೃತರ ಮನೆಗೆ ಸಿಪಿಎಂ ಏರಿಯಾ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ಪ್ರಶಾಂತ್ ಕನಿಲ, ಪೈವಳಿಕೆ ಲೋಕಲ್ ಕಾರ್ಯ ದರ್ಶಿ ಚಂದ್ರನಾಯ್ಕ್ ಮಾನಿಪ್ಪಾಡಿ, ಇಬ್ರಾಹಿಂ ಶಿರಂತಡ್ಕ, ಚಂದ್ರಹಾಸ ಕರುವೋಳು, ರವಿ ಸಹಿತ ಹಲವರು ಭೇಟಿ ನೀಡಿ ಸಂತಾಪ ಸೂಚಿಸಿದರು.




