ಕಾಸರಗೋಡು: ಕಾಸರಗೋಡು ಮೆಡಿಕಲ್ ಕಾಲೇಜು ಪೂರ್ಣ ಮಟ್ಟ ದಲ್ಲಿ ಸಜ್ಜುಗೊಳಿಸಲು ಪ್ರಥಮ ಪರಿಗಣನೆ ನೀಡುವುದಾಗಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಕಾಸರಗೋಡು ಶಾಸಕರಾಗಿ ಆಯ್ಕೆಯಾದ ಕಲ್ಲಟ್ರ ಮಾಹಿನ್ ಹಾಜಿಯವರಿಗೆ ಭರವಸೆ ನೀಡಿದ್ದಾರೆ. ಅಭಿವೃದ್ಧಿರಂಗದಲ್ಲಿ ಕಾಸರಗೋಡಿನ ಲೋಪವನ್ನು ಹಾಗೂ ಬೇಡಿಕೆಗಳನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ಹಾಗೂ ಕೈಗಾರಿಕಾ ಸಚಿವ ಪಿ.ಕೆ. ಕುಂಞಾಲಿಕುಟ್ಟಿ ಅವರ ಗಮನಕ್ಕೆ ತರಲಾಯಿತು. ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನು, ನ್ಯಾಯವಾದಿ ಎ. ಗೋವಿಂ ದನ್ ನಾಯರ್, ಮಾಹಿನ್ ಕೇಳೋಟ್, ಎಂ.ಎ.ಎಚ್. ಮಹಮ್ಮೂದ್, ಅನ್ವರ್ ಕೋಳಿಯಡ್ಕ, ಸಿದ್ದಿಕ್ ಪಳ್ಳಿಪುಳ ಎಂಬಿವರು ಜೊತೆಗಿದ್ದರು.





