ಕಾಸರಗೋಡು: ಜನಪ್ರಿಯ ವೈದ್ಯ ಹಾಗೂ ಪರಿಸರ ಜೀವವೈವಿಧ್ಯ ಸಂರಕ್ಷಣಾ ಹೋರಾಟಗಾರರಾಗಿದ್ದ ದಿ| ಡಾ| ಸಾಲಿಹ್ ಮುಂಡೋಳ್ ಅವರ ಸ್ಮರಣಾರ್ಥ ನೀಡುವ ಪ್ರಥಮ ಡಾ| ಸಾಲಿಹ್ ಮುಂ ಡೋಳ್ ಪುರಸ್ಕಾರಕ್ಕೆ ಬೆಳ್ಳೂರು ನಾಟೆಕಲ್ಲಿನಲ್ಲಿ ಆಯುರ್ವೇದ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಡಾ| ವಿದ್ಯಾಮೋಹನ್‌ದಾಸ್ ರೈ ಆಯ್ಕೆಯಾಗಿದ್ದಾರೆ. ೪೦ ವರ್ಷ ಗಳಿಗೂ ಹೆಚ್ಚು ಕಾಲ ವೈದ್ಯಕೀಯ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪುರಸ್ಕಾರ ನೀಡಲಾಗುತ್ತಿದೆ. ಪ್ರೊ| ಎಂ.ಎ. ರೆಹಮಾನ್, ಮುಕುಂದನ್ ಪಿ.ಕೆ, ಮೋಹನನ್ ಮಾಂಙಾಡ್, ಶ್ರೀಜಾ ಪುರುಷೋತ್ತಮನ್, ಅಬ್ದುಲ್ಲ ಕುಂಞಿ ಉದುಮ ಎಂಬಿವರನ್ನೊಳ ಗೊಂಡ ಆಯ್ಕೆ ಸಮಿತಿ ಡಾ| ವಿದ್ಯಾಮೋಹನ್ ದಾಸ್ ರೈಯವರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಹತ್ತು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡ ಪುರಸ್ಕಾರವನ್ನು ಸೆ. ೨೭ರಂದು ಸಂಜೆ ೪ ಗಂಟೆಗೆ ಉದುಮ ಪಳ್ಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಪರಿಸರ ಹೋರಾಟಗಾರ ಡಾ. ಸಿ.ಪಿ.ಶಾಜಿ ವಿತರಿಸಲಿದ್ದಾರೆ.





