ಕಾಸರಗೋಡು: ವಿಶ್ವಕರ್ಮ ಜಯಂತಿ ದಿನವಾದ ನಿನ್ನೆ ಬಿಎಂಎಸ್ ನೇತೃತ್ವದಲ್ಲಿ ರಾಷ್ಟ್ರೀಯ ಕಾರ್ಮಿಕರ ದಿನ ಆಚರಿಸಲಾಯಿತು. ಕಾಸರಗೋಡು ಹಾಗೂ ಮಧೂರು ವಲಯಗಳ ಸಂಯುಕ್ತ ಆಶ್ರಯದಲ್ಲಿ ಮೆರವಣಿಗೆ ಮತ್ತು ಸಾರ್ವಜನಿಕ ಸಭೆ ಜರಗಿತು. ಬಿಎಂಎಸ್ ಜಿಲ್ಲಾ ಜಂಟಿ ಕಾರ್ಯದರ್ಶಿ ಗುರುದಾಸ್ ಮಧೂರು ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷ ಉಪೇಂದ್ರನ್ ಕೋಟೆಕಣಿ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಪ್ರಧಾನ ಭಾಷಣ ಮಾಡಿದರು. ಬಿಎಂಎಸ್ ಮಧೂರು ವಲಯ ಅಧ್ಯಕ್ಷ ವಸಂತ ನಾಯಕ್ ಶುಭ ಹಾರೈಸಿದರು. ಜಿಲ್ಲಾ ಕೋಶಾಧಿಕಾರಿ ಮನೀಶ್, ಜಂಟಿ ಕಾರ್ಯದರ್ಶಿಗಳಾದ ಭಾಸ್ಕರನ್ ಪೊಯಿನಾಚಿ, ಹರೀಶ್ ಕುದ್ರೆಪ್ಪಾಡಿ, ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ. ನಾಯರ್, ವಲಯ ಉಪಾಧ್ಯಕ್ಷ ಎ. ಕೇಶವ, ಎಸ್.ಕೆ. ಉಮೇಶ್ ನೇತೃತ್ವ ನೀಡಿದರು. ಬಿಎಂಎಸ್ ಕಾಸರಗೋಡು ವಲಯ ಕಾರ್ಯದರ್ಶಿ ಬಾಬುಮೋನ್ ಚೆಂಗಳ ಸ್ವಾಗತಿಸಿ, ಮಧೂರು ವಲಯ ಕಾರ್ಯದರ್ಶಿ ಶ್ರೀಧರನ್ ಸಿ.ಎಚ್. ವಂದಿಸಿದರು.





