ಗಿಳಿವಿಂಡು: ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಾಳೆ

ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಇದರ ಆಶ್ರಯದಲ್ಲಿ ನೂತನ ವರ್ಷದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಾಳೆ ಅಪರಾಹ್ನ 2.30ಕ್ಕೆ ಮಂಜೇಶ್ವರ ಗಿಳಿವಿಂಡುನಲ್ಲಿ ನಡೆಯಲಿದೆ. ಟ್ರಸ್ಟ್‌ನ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಉದ್ಘಾಟಿಸು ವರು. ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಸೈಫುಲ್ಲ ತಂಙಳ್, ಪಂ. ಅಧ್ಯಕ್ಷ ಬಶೀರ್ ಕನಿಲ, ಜಿ.ಪಂ. ಸದಸ್ಯ ಹರ್ಷಾದ್ ವರ್ಕಾಡಿ, ಟ್ರಸ್ಟ್‌ನ ಟ್ರಸ್ಟಿ ಡಾ. ಎಂ. ರಮಾನಂದ ಬನಾರಿ ಉಪಸ್ಥಿತರಿರುವರು. ಬಳಿಕ ‘ಗುರುದಕ್ಷಿಣೆ’ ಕಥಾ ಭಾಗದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಕಲಾವಿದರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ರತ್ನಾಕರ ಆಳ್ವ ತಲಪಾಡಿ, ಚಿಪ್ಪಾರು ರಾಜರಾಮ ಬಲ್ಲಾಳ್, ಭಾಸ್ಕರ ದೇವಾಡಿಗ ಕೋಳ್ಯೂರು, ರಾಧಾಕೃಷ್ಣ ಕಲ್ಚಾರ್, ಸದಾಶಿವ ಆಳ್ವ ತಲಪಾಡಿ, ನಾಗರಾಜ ಪದಕಣ್ಣಾಯ ಮೂಡಂಬೈಲು, ವಿಠಲ ಭಟ್ ಮೊಗಸಾಲೆ, ರಾಜರಾಮ ರಾವ್ ಮೀಯಪದವು ಭಾಗವಹಿಸುವರು. ಸತೀಶ್ ಅಡಪ ಸಂಕಬೈಲು ಸಂಯೋಜಿಸುವರು.

RELATED NEWS

You cannot copy contents of this page