ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಮಾಜಿ ಅನಿವಾಸಿ ನಿಧನ

ಕುಂಬಳೆ: ಅಸೌಖ್ಯ ಬಾಧಿಸಿ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕುಂಬಳೆ ರೈಲ್ವೇ ನಿಲ್ದಾಣ ಸಮೀಪದ  ನಿವಾಸಿ ಬಿ.ಎಂ. ಮುಹಮ್ಮದ್ ಅಲಿ (58) ನಿಧನಹೊಂದಿದರು.  ಮಾಜಿ ಅನಿವಾಸಿಯಾಗಿದ್ದ ಇವರು ಮುಸ್ಲಿಂ ಲೀಗ್‌ನ ಸಕ್ರಿಯ ಕಾರ್ಯಕರ್ತ ನಾಗಿದ್ದರು.   ದಿ| ಬಾವ ಹಾಜಿ-ಆಯಿಷ ದಂಪತಿಯ ಪುತ್ರನಾದ ಮೃತರು ಪತ್ನಿ ಶಾರ್ತಾಜ್,  ಮಕ್ಕಳಾದ ಮಿಸಾಜ್, ಮಿನ್‌ಹಾಜ್, ಮಿಸ್‌ಹಬ್, ಅಳಿಯ ದಿಲ್ಶಾದ್, ಸಹೋದರ-ಸಹೋದರಿಯರಾದ ಮುಮ್ತಾಸ್, ಬಿ.ಎಂ. ಸಿದ್ದಿಕ್ ಅಲಿ,  ರಸೀನ, ಬಿ.ಎಂ. ಅಶ್ರಫ್ ಅಲಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿಧನಕ್ಕೆ ಕುಂಬಳೆ ೧೮ನೇ ವಾರ್ಡ್ ಮುಸ್ಲಿಂ ಲೀಗ್ ಕಮಿಟಿ, ಟೌನ್ ೨೪ನೇ ವಾರ್ಡ್ ಕಮಿಟಿ ಸಂತಾಪ ಸೂಚಿಸಿದೆ.

You cannot copy contents of this page