ಮಾಜಿ ಕೌನ್ಸಿಲರ್ ನಿಧನ

ಕಾಸರಗೋಡು: ನಗರಸಭಾ ಮಾಜಿ ಕೌನ್ಸಿಲರ್, ಕಡಪ್ಪುರ ಎಸ್‌ಸಿ ಬಿಬಿಎಂ ರಸ್ತೆಯ ಕೆ.ಬಿ. ಗಂಗಾಧರನ್ (64) ನಿಧನ ಹೊಂದಿದರು. ದಿ| ಕಣ್ಣಪ್ಪ- ಸುಶೀಲ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಸುಕನ್ಯ, ಮಕ್ಕಳಾದ ನೀತು, ನಿಖಿಲ್, ನಖಿಲ್, ಅಳಿಯ ಪ್ರಿಜೇಶ್,  ಸಹೋದರಿ ಪುಷ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಸಿಪಿಎಂ ಕಾರ್ಯಕರ್ತನಾದ ಇವರು ಚೀರುಂಬಾ ಭಗವತೀ ಭಜನಾ ಸಮಿತಿ ಅಧ್ಯಕ್ಷ, ಪಿಲಿಕುಂಜೆ- ತಳಂಗರೆ- ಪಾಲಕುನ್ನು ಭಗವತೀ ಸೇವಾ ಸಂಘದ ಜೊತೆ ಕಾರ್ಯದರ್ಶಿ, ತೋಟತ್ತಿಲ್ ತರವಾಡು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

You cannot copy contents of this page