ಆಸ್ಪತ್ರೆಗೆ ಹೋದ ಬಾಲಕಿ ನಾಪತ್ತೆ

ಉಪ್ಪಳ: ಆಸ್ಪತ್ರೆಗೆಂದು ತಿಳಿಸಿ ವಾಸಸ್ಥಳದಿಂದ ಹೋದ ಬಾಲಕಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ.

ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮಜೀರ್ಪಳ್ಳ ಧರ್ಮನಗರ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಝಾಕಿಯಬಾನು (17) ನಾಪತ್ತೆಯಾದ ಬಾಲಕಿ. ಈಬಗ್ಗೆ ತಂದೆ ಮುಹಮ್ಮದ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ನಿನ್ನೆ ಬೆಳಿಗ್ಗೆ 9.30 ಕ್ಕೆ ಮಜೀರ್ಪಳ್ಳದ ಸರಕಾರಿ ಆಸ್ಪತ್ರೆಗೆಂದು ತಿಳಿಸಿ ಬಾಲಕಿ ಕ್ವಾರ್ಟರ್ಸ್‌ನಿಂದ ತೆರಳಿದ್ದು ಅನಂತರ ಮರಳಿ ಬಂದಿಲ್ಲವೆಂದು ತಂದೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

You cannot copy contents of this page