ಕುಂಬಳೆ: 14ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಮೇಲ್ಪರಂಬ ಕಳನಾಡು ಕಟ್ಟೆಕ್ಕಾಲ್‌ನಲ್ಲಿ ಗೂಡಂಗಡಿ ನಡೆಸುವ ಮೊಹಮ್ಮದ್ ಮುನೀರ್ (24) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಈ ಹಿಂದೆ ಈತ ಮೊಗ್ರಾಲ್‌ನಲ್ಲಿ ಗೂಡಂಗಡಿ ನಡೆಸುತ್ತಿದ್ದನು. ಈ ವೇಳೆ ಬಾಲಕಿಗೆ ಕಿರುಕುಳ ನೀಡಿರುವುದಾಗಿ ದೂರಲಾ ಗಿತ್ತು. ಇದರಂತೆ ಮೊಹಮ್ಮದ್ ಮುನೀರ್ ವಿರುದ್ಧ ಪೊಲೀಸರು ಪೋಕ್ಸೋ ಕೇಸು ದಾಖಲಿ ಸಿಕೊಂ ಡಿದ್ದರು. ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್ ನೇತೃತ್ವದಲ್ಲಿ ಬಂಧಿಸಲಾಗಿದೆ.







