ಕುಂಬಳೆ: ಮಂಗಲ್ಪಾಡಿ ಪಂಚಾಯತ್ನ ಜೋಡುಕಲ್ಲಿನಲ್ಲಿ ಲೋಕೋಪಯೋಗಿ ಇಲಾಖೆಯ ಸ್ಥಳದಲ್ಲಿ ನಿರ್ಮಿಸಿದ ಅನಧಿಕೃತ ಕಟ್ಟಡವನ್ನು ಮುರಿದು ತೆಗೆಯುವಂತೆ ಹೈಕೋರ್ಟ್ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದೆ. ಉಪ್ಪಳ-ಕನ್ಯಾನ ರಸ್ತೆಯ ಬೇಕೂರು ಗ್ರಾಮಕ್ಕೊಳಪಟ್ಟ ಲೋಕೋಪಯೋಗಿ ಇಲಾಖೆಯ ಸ್ಥಳದಲ್ಲಿ ಅನಧಿಕೃತ ನಿರ್ಮಾಣ ನಡೆಯುತ್ತಿದೆಯೆಂಬ ಯೂತ್ ಲೀಗ್ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ರ ದೂರಿನ ಮೇರೆಗೆ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ವಿಲ್ಲೇಜ್ನ 8/121 ಸರ್ವೇ ನಂಬ್ರದಲ್ಲಿ ಒಳಗೊಂಡ ಸ್ಥಳದಲ್ಲಿ ಕಾನೂನು ವಿರುದ್ಧವಾಗಿ ಅತಿಕ್ರಮಣ ನಡೆಯುತ್ತಿದೆಯೆಂದು ದೂರಿನಲ್ಲಿ ಆರೋಪಿಸಲಾಗಿದೆ. ಜೋಡುಕಲ್ಲು ಗ್ರಾಮೀಣ ಬ್ಯಾಂಕ್ನ ಸಮೀಪವಿರುವ ಪುರಂಬೋಕ್ ಭೂಮಿಯಲ್ಲಿ ಖಾಯಂ ನಿರ್ಮಾಣ ಚಟುವಟಿಕೆ ನಡೆಯುತ್ತಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ. ನಿರ್ಮಾ ಣಕ್ಕೆ ತಡೆಯೊಡ್ಡಿ ಜುಲೈ ೨೨ರಂದು ಪಂಚಾಯತ್ ಕಾರ್ಯದರ್ಶಿ ಸ್ಟಾಪ್ ಮೆಮೋ ನೀಡಿದ್ದರೂ ನಿರ್ಮಾಣ ಚಟುವಟಿಕೆ ಮುಂದುವರಿಸಲಾಗಿ ದೆಯೆಂದು ದೂರಲಾಗಿದೆ. ರೆವೆನ್ಯೂ ಸೆಕ್ರೆಟರಿ, ಜಿಲ್ಲಾಧಿಕಾರಿ, ತಹಶೀ ಲ್ದಾರ್, ಲೋಕೋಪಯೋಗಿ ಇಲಾ ಖೆ ಎಕ್ಸಿಕ್ಯೂಟಿವ್ ಇಂಜಿನಿಯರ್, ಅಸಿಸ್ಟೆಂಟ್ ಇಂಜಿನಿಯರ್, ಮಂಗಲ್ಪಾಡಿ ಪಂಚಾಯತ್ ಕಾರ್ಯದರ್ಶಿ, ಕುಂಬಳೆ ಇನ್ಸ್ಪೆಕ್ಟರ್ , ಜೋಡುಕಲ್ಲು ಸೇವಾ ಭಾರತಿ ಎಂಬಿವರು ವಿರುದ್ಧ ಕಕ್ಷಿಗಳಾಗಿದ್ದಾರೆ. ಸೆಪ್ಟಂಬರ್ 16ರಂದು ನೀಡಿದ ದೂರಿನಲ್ಲಿ ಅದೇ ದಿನ ನ್ಯಾಯಾಲಯ ತೀರ್ಪು ನೀಡಿದೆ. ಇದೇ ವೇಳೆ ಹೈಕೋರ್ಟ್ನ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ನ್ನು ಸಮೀ ಪಿಸುವ ಕುರಿತು ಆಲೋಚನೆಯಲ್ಲಿ ರುವುದಾಗಿಯೂ ಹೇಳಲಾಗುತ್ತಿದೆ.






