ಕುಂಬಳೆ: ಎಂಟು ದಶಕದ ಶಿಕ್ಷಣ ಪರಂಪರೆಯಿರುವ ಇಚ್ಲಂಗೋಡು ಇಸ್ಲಾಮಿಯ ಎಎಲ್ಪಿ ಶಾಲೆಯ 80ನೇ ವಾರ್ಷಿಕಾಚರಣೆ ನಾಳೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕುಂಬಳೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಪದಾಧಿಕಾರಿಗಳು ತಿಳಿಸಿದ್ದಾರೆ. ನಾಳೆ ಅಪರಾಹ್ನ 2 ಗಂಟೆಯಿಂದ ಬೀರೊಳಿಕೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದರಂಗ ವಾಗಿ 80 ವರ್ಷದ ಇತಿಹಾಸ ದಾಖಲಿ ಸಿದ ಸ್ಮರಣ ಸಂಚಿಕೆ ಬಿಡುಗಡೆಗೊಳಿ ಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮೆನೇಜರ್ ಮೊಹಮ್ಮದ್ ಅನ್ಸಾರಿ ಶೆರುಳ್, ವಿದ್ಯಾಲಯದ ಕಿಚನ್, ಸ್ಟೋರ್ ನಿರ್ಮಾಣಕ್ಕೆ ನೇತೃತ್ವ ನೀಡಿದ ಕಾಂಟ್ರಾಕ್ಟರ್ ಸಾಬಿರ್, ತಾರನಾಥ್ ಎಂಬಿವರನ್ನು ಸನ್ಮಾನಿಸಲಾಗುವುದು. ಇದೇ ವೇಳೆ ದಿ| ನಿವೃತ್ತ ಮುಖ್ಯೋಪಾಧ್ಯಾಯ ರಂಜಿತ್ರ ಸ್ಮರಣಾರ್ಥ ಏರ್ಪಡಿಸಿದ ಎಂಡೋಮೆಂಟ್ ವಿತರಣೆ, ಮೆಗಾ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗಿರುವ ಬಹುಮಾನ ವಿತರಣೆಯು ನಡೆಯಲಿದೆ. ಶಾಲಾ ಮಕ್ಕಳಿಂದ ವಿವಿಧ ಕಲಾ ಕಾರ್ಯಕ್ರಮಗಳೂ ನಡೆಯಲಿದೆ. ರಾತ್ರಿ ೮ರಿಂದ ಸುಧೀರ್ ಮಡವೂರ್ರ ಮ್ಯಾಜಿಕ್ ಸಿಲ್ಸಿಲ, ಕಲ್ಲಿಕೋಟೆ ಎಕ್ಕೋ ಮ್ಯೂಸಿಕಲ್ ಬ್ಯಾಂಡ್ ಅವರಿಂದ ಗಾನಮೇಳ ನಡೆಯಲಿದೆ. ಕಾರ್ಯಕ್ರಮವನ್ನು ಮಂಜೇಶ್ವರ ಎಇಒ ಜೋರ್ಜ್ ಕ್ರಾಸ್ತ ಉದ್ಘಾಟಿಸುವರು. ಕುಂಬಳೆ ಸಿಐ ಬೈಜು ಕೆ. ಜೋಸ್ ಅತಿಥಿಯಾಗಿರುವರು. ಮಜೀದ್ ಪಚ್ಚಂಬಳ ಅಧ್ಯಕ್ಷತೆ ವಹಿಸುವರು. ಮುಖ್ಯೋಪಾಧ್ಯಾಯ ಜಿಜೇಶ್, ಪಿಟಿಎ ಅಧ್ಯಕ್ಷ ನಸೀಮ್ ಇಚ್ಲಂಗೋಡು ಸಹಿತ ಹಲವು ಮಂದಿ ಭಾಗವಹಿಸುವರು. ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಮಜೀದ್ ಪಚ್ಚಂಬಳ, ಪ್ರಧಾನ ಸಂಚಾಲಕ ಹಸನ್ ಇಚ್ಲಂಗೋಡು, ಪಿಟಿಎ ಅಧ್ಯಕ್ಷ ನಸೀಮ್ ಮೊಗರ್, ಮುಖ್ಯೋಪಾಧ್ಯಾಯ ಜಿಜೇಶ್, ಬಶೀರ್ ಭಾಗವಹಿಸಿದರು.






