ಕಾಂಗ್ರೆಸ್‌ನೊಳಗಿನ ಆಂತರಿಕ ಕಚ್ಚಾಟ ರಾಜ್‌ಮೋಹನ್ ಉಣ್ಣಿತ್ತಾನ್‌ರ ಹೇಳಿಕೆಯಿಂದ ಪ್ರಕಟ- ಎಂ.ಎಲ್. ಅಶ್ವಿನಿ

ಕಾಸರಗೋಡು: ಪುಲ್ಲೂರು ಪೆರಿಯ ಪಂಚಾಯತ್ ಅಧ್ಯಕ್ಷ ಚುನಾವಣೆಯ ಮೊದಲ ಅವಕಾಶದಲ್ಲಿ ೪ ಐಕ್ಯರಂಗದ ಜನಪ್ರತಿನಿಧಿಗಳು ದೂರವುಳಿದಿರುವುದು ಕಾಂಗ್ರೆಸ್‌ನ ಆಂತರಿಕ ಭಿನ್ನಮತೀಯ ಧೋರಣೆಯ ಮುಖವೆಂದು ಇದನ್ನು ಬಿಜೆಪಿಯ ತಲೆಗೆ ಕಟ್ಟಿಕೊಡಲು ಸಂಸದ ರಾಜ್‌ಮೋಹನ್ ಯತ್ನಿಸುತ್ತಿರುವು ದಾಗಿಯೂ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಜಿಲ್ಲೆಯಲ್ಲಿ ಲೀಗ್ ಕಾಂಗ್ರೆಸ್‌ನ್ನು ನುಂ ಗಿದ್ದು, ರಾಜ್‌ಮೋಹನ್ ಉಣ್ಣಿತ್ತಾನ್‌ರ ನಿಲುವಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ದೊಡ್ಡ ಮಟ್ಟಿನ ಅಸ್ವಸ್ಥತೆ ಇದೆ. ಇದನ್ನು ಮರೆಮಾಚಲು ರಾಜ್ ಮೋಹನ್ ಉಣ್ಣಿತ್ತಾನ್ ಸ್ವಂತ ಪಕ್ಷದ ಜನಪ್ರತಿನಿಧಿಗಳು, ಬಿಜೆಪಿಯೊಂದಿಗೆ ಆಂತರಿಕ ಹೊಂದಾಣಿಕೆ ಇದೆ ಎಂಬ ಆರೋಪ ಹೊರಿಸುತ್ತಿದ್ದಾರೆ. ಎಲ್‌ಡಿ ಎಫ್- ಯುಡಿಎಫ್ ಒಕ್ಕೂಟಗಳನ್ನು, ಈ ಒಕ್ಕೂಟಗಳನ್ನು ಬೆಂಬಲಿಸುವ ಸ್ವತಂತ್ರರೊಂದಿಗೆ, ಅಧ್ಯಕ್ಷ, ಉಪಾಧ್ಯ ಕ್ಷರ ಹುದ್ದೆಗೆ ಬೆಂಬಲಿಸುವುದಿಲ್ಲವೆಂಬ ಬಿಜೆಪಿ ರಾಜ್ಯ ನೇತೃತ್ವದ ನಿಲುವಿನಂ ಗವಾಗಿ ಪುಲ್ಲೂರು ಪೆರಿಯ ಪಂಚಾಯತ್‌ನ ಬಿಜೆಪಿ ಜನಪ್ರತಿನಿಧಿ ಎ. ಸಂತೋಷ್ ಕುಮಾರ್ ಮತದಾನ ದಿಂದ ದೂರವುಳಿದಿದ್ದರು. ಅಧ್ಯಕ್ಷ ಚುನಾವಣೆಗಿರುವ ಎರಡನೇ ಅವಕಾಶ ದಲ್ಲೂ ಪುಲ್ಲೂರು ಪೆರಿಯ ಪಂಚಾ ಯತ್‌ನ ಬಿಜೆಪಿ ಪ್ರತಿನಿಧಿ ದೂರವುಳಿ ದಿರುವುದಾಗಿಯೂ ಬಿಜೆಪಿ ಜನಪ್ರತಿ ನಿಧಿಗಳು ಮುಂದಿನ ದಿನಗಳಲ್ಲೂ ಎಲ್‌ಡಿಎಫ್- ಯುಡಿಎಫ್ ವಿರುದ್ಧ ನಿಲುವು ಮುಂದುವರಿಸುವರು ಎಂದು ಅಶ್ವಿನಿ ನುಡಿದರು.

You cannot copy contents of this page