ಕಣ್ಣೂರು: ವಿಸ್ಮಯ ಪಾರ್ಕ್‌ನಲ್ಲಿ ಹೊಸ ಇಟಾಲಿಯನ್ ರೈಡ್ ರೋಡಿಕ್ಸ್ ಚಟುವಟಿಕೆ ಆರಂಭಗೊಂಡಿದ್ದು, ಸ್ಪೀಕರ್ ಎ.ಎನ್. ಶಂಸೀರ್ ಇದನ್ನು ಉದ್ಘಾಟಿಸಿದರು. ವಿಸ್ಮಯ ಅಮ್ಯೂಸ್‌ಮೆಂಟ್ ಪಾರ್ಕ್‌ನ ಅಧ್ಯಕ್ಷ ಪಿ.ವಿ. ಗೋಪಿನಾಥ್ ಅಧ್ಯಕ್ಷತೆ ವಹಿಸಿದರು. ೧೫ ಕೋಟಿ ರೂ.ಗಳಷ್ಟು ವೆಚ್ಚದ ಈ ರೈಡನ್ನು ಇಟಾಲಿಯನ್ ಕಂಪೆನಿಯಾದ ಮೊಸಾರ್ ನಿರ್ಮಿಸಿದೆ. ಇಟೆಲಿಯಿಂದ ತಲುಪಿದ ತಜ್ಞರು ಇದನ್ನು ಜೋಡಿಸಿದ್ದಾರೆ. ಸಹಕಾರಿ ವಲಯದ ಪ್ರಥಮ ಅಮ್ಯೂಸ್‌ಮೆಂಟ್ ಪಾರ್ಕ್ ಆದ ವಿಸ್ಮಯ ದೇಶದ ಬೃಹತ್ ಪಾರ್ಕ್‌ಗಳೊಂದಿಗೆ ಸ್ಪರ್ಧಿಸುತ್ತಿದೆ. ಮಕ್ಕಳು, ಹಿರಿಯರೆಂಬ ಭೇದ ಭಾವವಿಲ್ಲದೆ ಯಾವುದೇ ಪ್ರಾಯದವರಿಗೂ ಇದನ್ನು ಆಸ್ವಾದಿಸಲು ಸಾಧ್ಯವಾಗುವುದು.
ಉಪಾಧ್ಯಕ್ಷ ಕೆ. ಸಂತೋಷ್ ಸ್ವಾಗತಿಸಿ, ಮೆನೇಜಿಂಗ್ ಡೈರೆಕ್ಟರ್ ಇ. ವೈಶಾಖ್ ವಂದಿಸಿದರು. ಟಿ.ಕೆ. ಗೋವಿಂದನ್ ಮಾಸ್ತರ್, ಪಿ.ಪಿ. ಗಂಗಾಧರನ್, ಅಜೇಶ್ ಆರ್.ಕೆ., ಪಿ.ಕೆ. ಮುಜೀಬ್ ರಹ್ಮಾನ್, ವಲ್ಸನ್ ಕಡಂಬೇರಿ, ಸಮದ್ ಕಡಂಬೇರಿ, ಎಂ. ದಾಮೋದರನ್, ಒ. ಸುಭಾಗ್ಯ, ಕೆ. ರಾಜೀವನ್ ಶುಭ ಕೋರಿದರು.







