ಜೇಮ್ಸ್ ಡಿಸೋಜ ನಿಧನ

ಪೆರ್ಲ: ಇಲ್ಲಿಗೆ ಸಮೀಪದ ಬೊಲ್ಕಿನಡ್ಕ ನಿವಾಸಿ ಜೇಮ್ಸ್ ಡಿಸೋಜ (72) ನಿನ್ನೆ ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕೃಷಿಕರಾಗಿದ್ದ ಇವರು ಮಣಿಯಂಪಾರೆ ಸಂತ ಲಾರೆನ್ಸ್‌ರ ಇಗರ್ಜಿ ನಿರ್ಮಾಣ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿ ಪದಾಧಿಕಾರಿಯಾಗಿ ಕಾರ್ಯನಿರ್ವ ಹಿಸಿದ್ದರು. ಮೃತರು ಪತ್ನಿ ಲೂಸಿ ಡಿಸೋಜ, ಮಕ್ಕಳಾದ ಸಂತೋಷ್ ಡಿಸೋಜ, ದಯಾಕಿಶೋರ್, ಸಚಿನ್, ಸೋಫಿಯ, ಸೊಸೆಯಂದಿರಾದ ಝೀನಪ್ರಿಯ, ವಿನಯ ಡಿಸೋಜ, ಅಶ್ವಿನಿ ಡಿಸೋಜ, ಸಹೋದರ ಥೋಮಸ್ ಡಿಸೋಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page