ಕುಂಬಳೆಯಲ್ಲಿ ಕೆ.ಜಿ. ಮಾರಾರ್ ಸಂಸ್ಮರಣೆ

ಕುಂಬಳೆ:  ಬಿಜೆಪಿ ಪಂಚಾ ಯತ್ ಸಮಿತಿ ವತಿಯಿಂದ ಬಿಜೆಪಿಯ ಹಿರಿಯ ನೇತಾರರಾಗಿದ್ದ ಕೆ.ಜಿ. ಮಾರಾರ್ ರವರ ೩೧ನೇ ಸಂಸ್ಮರಣೆ ಕುಂಬಳೆ ಪಕ್ಷದ ಕಚೇರಿಯಲ್ಲಿ ನಡೆಯಿತು. ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬಿಜೆಪಿ ಕುಂಬಳೆ ದಕ್ಷಿಣ ವಲಯ ಸಮಿತಿ ಅಧ್ಯಕ್ಷ ಕೆ. ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಉದ್ಘಾಟಿಸಿದರು. ಮುಖಂಡರಾದ ಶಿವಪ್ರಸಾದ್ ರೈ, ಕೆ. ರಮೇಶ್ ಭಟ್, ಕೆ. ಸುಧಾಕರ ಕಾಮತ್, ಶಶಿ ಕುಂಬಳೆ ಐತಪ್ಪ ಎನ್, ವರುಣ ಕುಮಾರ್, ವಿನೋದನ್ ಕಡಪ್ಪುರ, ಹರಿಪ್ರಸಾದ್ ಉಪಸ್ಥಿತರಿದ್ದರು. ವಿವೇಕಾನಂದ ಶೆಟ್ಟಿ ಸ್ವಾಗತಿಸಿ, ಕಾಂಚಾರ  ವಂದಿಸಿದರು.

RELATED NEWS

You cannot copy contents of this page