ಬೆಂಗಳೂರು: ಕನ್ನಡ- ತಮಿಳು ಕಿರುತೆರೆ ನಟಿ ಸಿ.ಎಂ. ನಂದಿನಿ (26) ಯವರನ್ನು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ. ಬಾಡಿಗೆಗೆ ವಾಸಿಸುವ ಕೆಂಗೇರಿಯ ಮನೆಯಲ್ಲಿ ನಟಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೊಠಡಿಯಿಂದ ಆತ್ಮಹತ್ಯಾ ಪತ್ರವನ್ನು ಪತ್ತೆಹಚ್ಚಲಾಗಿದೆ. ವೈಯಕ್ತಿಕ ಸಮಸ್ಯೆಗಳು ತನ್ನನ್ನು ಬೇಟೆಯಾಡುತ್ತಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ನಂದಿನಿಯನ್ನು ಫೋನ್ ಮೂಲಕ ಕರೆದಾಗ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಸಂಬಂಧಿಕರು ವಾಸ ಸ್ಥಳದ ಸಮೀಪ ನಿವಾಸಿಗಳಿಗೆ ತಿಳಿಸಿದ್ದು, ಅವರು ನೋಡಿದಾಗ ಕಿಟಿಕಿಗೆ ಶಾಲು ಉಪ ಯೋಗಿಸಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಆದರೆ ಇದರಲ್ಲಿ ಯಾವುದೇ ನಿಗೂಢತೆ ಇಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ನಟನೆಯಲ್ಲಿ ಆಸಕ್ತಿ ಇದ್ದ ನಂದಿನಿಯವರಿಗೆ ಮನೆಯ ವರು ಸರಕಾರಿ ಕೆಲಸಕ್ಕೆ ಯತ್ನಿ ಸುತ್ತಿದ್ದು, ವಿವಾಹಕ್ಕೂ ಒತ್ತಾಯಪಡಿಸು ತ್ತಿದ್ದರೆನ್ನ ಲಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಗೈದಿರಬೇಕೆಂದು ಶಂಕಿಸಲಾಗಿದೆ.







