ಕಾಸರಗೋಡು : ಭಾಸ್ಕರ ಕುಂಬಳೆ ಬಲಿದಾನ ದಿನಾಚರಣೆ

ಕುಂಬಳೆ: ಡಿವೈಎಫ್‌ಐ ನೇತಾರನಾಗಿದ್ದ ಭಾಸ್ಕರ ಕುಂಬಳೆ ಅವರ 29ನೇ ಬಲಿದಾನ ದಿನಾಚರಣೆಯಂಗವಾಗಿ ನಿನ್ನೆ ಕುಂಬಳೆ ಪೇಟೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು. ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ. ಸ್ವರಾಜ್ ಉದ್ಘಾಟಿಸಿ ಮಾತನಾಡಿ ದರು.  ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಶಾಲು ಮ್ಯಾಥ್ಯು ಅಧ್ಯಕ್ಷತೆ ವಹಿಸಿದರು.  ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಳ್ಳಾಟ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಶಾಸಕ ಎಂ. ರಾಜಗೋಪಾಲನ್, ರಾಜ್ಯ ಸಮಿತಿ ಸದಸ್ಯ ಶಾಸಕ ಸಿ.ಎಚ್. ಕುಂಞಂಬು, ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ, ಜಿಲ್ಲಾ ಸಮಿತಿ ಸದಸ್ಯ ಸಿ.ಎ. ಸುಬೈರ್, ಬ್ಲೋಕ್ ಅಧ್ಯಕ್ಷ ಮಜೀದ್ ಮೊದಲಾದವರು ಉಪಸ್ಥಿತರಿದ್ದರು. ವಿಶ್ವರಾಜ್ ಸ್ವಾಗತಿಸಿದರು. ಸಾರ್ವಜನಿಕ ಸಭೆಯ ಮುಂಚಿತ ಶಾಂತಿಪಳ್ಳದಿಂದ ಆರಂಭಿಸಿದ ಬಹುಜನ ರ‍್ಯಾಲಿ ಕುಂಬಳೆ ಪೇಟೆಯಲ್ಲಿ ಸಮಾಪ್ತಿಗೊಂಡಿತು.

RELATED NEWS

You cannot copy contents of this page