ಕೇರಳ ಯಾತ್ರೆ ಉದ್ಘಾಟನೆ ನಗರದಲ್ಲಿ ಧ್ವಜಾರೋಹಣ

ಕಾಸರಗೋಡು: ಕೇರಳ ಮುಸ್ಲಿಂ ಜಮಾಯತ್ ಆಶ್ರಯದಲ್ಲಿ ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್  ಮುನ್ನಡೆಸುವ ಕೇರಳ ಯಾತ್ರೆಯ ಉದ್ಘಾಟನೆ ಸಮ್ಮೇಳನ ನಡೆಯುವ ಚೆರ್ಕಳ ನೂರುಲ್ ಉಲಮಾ ನಗರದಲ್ಲಿ ಸಮಸ್ತ ದಿಂದ ಧ್ವಜಾರೋಹಣ ನಡೆಸಲಾಯಿತು.  ಸ್ವಾಗತ ಸಮಿತಿ ಅಧ್ಯಕ್ಷ ಹಕೀಂ ಹಾಜಿ ಕಳನಾಡು  ಧ್ವಜಾರೋಹಣಗೈದರು. ತಳಂಗರೆ ಮಾಲಿಕ್ ದೀನಾರ್ ನಲ್ಲಿ ನಡೆದ ಮಖಾಂ ಸಿಯಾರತ್ ಬಳಿಕ ಗಾರ್ಡ್ ಫ್ಲಾಗ್ ಮಾರ್ಚ್ ನಡೆಸಿ ಧ್ವಜವನ್ನು ನಗರಕ್ಕೆ ತಲುಪಿಸಲಾಗಿತ್ತು. ಹಲವು ಗಣ್ಯರು ಭಾಗವಹಿಸಿದರು. ಕೇರಳ ಯಾತ್ರೆಯ ಉದ್ಘಾಟನೆ ಜನವರಿ ೧ರಂದು ಸಂಜೆ ೪.೩೦ಕ್ಕೆ ಚೆರ್ಕಳದಲ್ಲಿ ನಡೆಯಲಿದೆ.

You cannot copy contents of this page