ಬೆಂಗಳೂರು: ಮೈಸೂರು ಬಳಿಯ ಪಿರಿಯಾಪಟ್ಟಣದಲ್ಲಿ ಸ್ಲೀಪರ್ ಬಸ್ ಹಾಗೂ ಸರಕು ಸಾಗಾಟ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ನಾಲ್ಕು ಮಂದಿ ಮೃತಪಟ್ಟರು. ೩೦ರಷ್ಟು ಮಂದಿಗೆ ಗಾಯ ಉಂಟಾಗಿದೆ. ಇಂದು ಮುಂಜಾನೆ 3.45ರ ವೇಳೆ ಅಪಘಾತ ಸಂಭವಿಸಿದೆ.
ಬೆಂಗಳೂರಿನಿಂದ ಕಲ್ಲಿಕೋಟೆಗೆ ಆಗಮಿಸುತ್ತಿದ್ದ ಕಾವೇರಿ ಸ್ಲೀಪರ್ ಬಸ್ ಹಾಗೂ ಮುಂಭಾಗದಿಂದ ಬಂದ ಸರಕು ಸಾಗಾಟ ಲಾರಿ ಮಧ್ಯೆ ಢಿಕ್ಕಿ ಸಂಭವಿಸಿದೆ. ಕೇರಳೀಯರಾದ ಬೇಪೂರು ನಿವಾಸಿ ಅಫ್ತಾಬ್, ಮಾಂಗಾವ್ ನಿವಾಸಿ ಶ್ರೀಜೇಶ್, ಸುನಿಲ್ ಹಾಗೂ ಗುರುತು ಹಚ್ಚಲಾಗದ ಇನ್ನೋರ್ವ ಮೃತಪಟ್ಟವರು. ಮೃತಪಟ್ಟವರಲ್ಲಿ ಚಾಲಕ ಹಾಗೂ ಕ್ಲೀನರ್ ಒಳಗೊಂಡಿದ್ದಾರೆನ್ನಲಾಗಿದೆ. ಗಾಯಗೊಂಡವರನ್ನು ಪಿರಿಯಾ ಪಟ್ಟಣ ಹಾಗೂ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ರಸ್ತೆಯಲ್ಲಿ ಮರ ಬಿದ್ದಿದ್ದ ಹಿನ್ನೆಲೆಯಲ್ಲಿ ಅದನ್ನು ತಪ್ಪಿಸಿ ಲಾರಿ ಸಂಚರಿಸುತ್ತಿದ್ದ ವೇಳೆ ಮುಂಭಾಗದಿಂದ ಬಂದ ಬಸ್ಗೆ ಢಿಕ್ಕಿ ಹೊಡೆದಿದೆ ಎಂದು ಪ್ರಾಥಮಿ ಕವಾಗಿ ತಿಳಿದು ಬಂದಿದೆ. ಮೃತ ದೇಹಗಳನ್ನು ಪಿರಿಯಾ ಪಟ್ಟಣದ ಸರಕಾರಿ ಆಸ್ಪತ್ರೆಯ ಶವಾಗಾರ ದಲ್ಲಿರಿಸಲಾಗಿದೆ.







