ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ಸಮಿತಿ ಆಶ್ರಯದಲ್ಲಿ ರಾಮಾಯಣ ಮಸಾಚರಣೆಯ ಅಂಗವಾಗಿ ಒಂದು ತಿಂಗಳ ಪರ್ಯಂತ ಮನೆ ಮನೆ ಭಜನಾ ಸಂಕೀರ್ತಾನಾ ಯಾನ ಆರಂಭಗೊAಡಿತು. ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಪರಿಸರದ ಹಿರಿಯ ಭಜಕರಾದ ಸರ್ವೋತ್ತಮ ಕಾಮತ್‌ರ ನಿವಾಸದಲ್ಲಿ ಕಾಮತ್ ದಂಪತಿ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಕೆ. ಎನ್. ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಕೆ. ಎನ್. ರಾಮಕೃಷ್ಣ ಹೊಳ್ಳ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ಗೌರವಾಧ್ಯಕ್ಷ ಹರಿದಾಸ ಜಯಾನಂದ ಹೊಸದುರ್ಗ, ಹಿರಿಯ ಕಾರ್ಯಕರ್ತ ಲಕ್ಮೀಕಾಂತ್ ನೆಲ್ಲಿಕುಂಜೆ, ವಿ ಎಚ್ ಪಿ ಪ್ರಖಂಡ ಕಾರ್ಯದರ್ಶಿಗಳಾದ ಕಿಶೋರ್ ಎಸ್ ವಿ ಟಿ, ವಸಂತ್ ಕೆರೆಮನೆ, ವಿ ಎಚ್ ಪಿ ಮಾತೃ ಸಮಿತಿಯ ಶ್ರೀಲತಾ ಟೀಚರ್ , ಶಾರದಾ ರಾವ್, ಶ್ರೀದೀವಿ, ಪೇಮ, ಶ್ರೀವಳ್ಳಿ, ವಿಜಯ ಶೆಟ್ಟಿ, ಸೌಮ್ಯ, ಶ್ವೇತಾ, ಗೀತಾ, ಸವಿತಾ, ವೆಂಕಟ್ರಮಣ ಬಾಲಗೋಕುಲದ ಶಿಕ್ಷಕಿಯರಾದ ಅದತಿ, ಅನುಶ್ರೀ ಹಾಗೂ ಮಕ್ಕಳು ಭಾಗವಹಿಸಿದರು. ಪಕ್ಕವಾದ್ಯ ಹಾರ್ಮೋನಿಯಂನಲ್ಲಿ ಹಿರಿಯ ಭಜಕರಾದ ತುಕಾರಾಮ ಆಚಾರ್ಯ ಕೆರೆಮನೆ, ತಬಲಾದಲ್ಲಿ ಕೇತನ್, ಮನ್ವಿತ್, ತೃಷನ್ ಸಹಕರಿಸಿದರು.






