ಎಡರಂಗ ಮತ್ತು ಐಕ್ಯರಂಗದ ಚುನಾವಣಾ ಪ್ರಣಾಳಿಕೆ ಪ್ರಕಟ: ಸಾಮಾಜಿಕ ಪಿಂಚಣಿ ಮೊತ್ತವನ್ನು 3000 ರೂ.ಗೇರಿಸಲಾಗುವುದೆಂದು ಉಭಯ ಒಕ್ಕೂಟಗಳ ಭರವಸೆ

ತಿರುವನಂತಪುರ: ಕೇರಳ ವಿಧಾನಸಭೆಗೆ ಚುನಾವಣೆಗೆ ಸಂಬಂಧಿಸಿ ಆಡಳಿತ ಒಕ್ಕೂಟವಾದ ಎಡರಂಗ ಮತ್ತು ವಿರೋಧಪಕ್ಷ ಯುಡಿಎಫ್ ಇಂದು ಎರಡೆಡೆಗಳಲ್ಲಾಗಿ  ಏಕ ಕಾಲದಲ್ಲಿ ತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆಗೊಳಿಸಿವೆ.

ಸಾಮಾಜಿಕ ಕಲ್ಯಾಣ ಪಿಂಚಣಿ ಮೊತ್ತವನ್ನು 3೦೦೦ ರೂ.ಗೇರಿಸಲಾಗುವು ದೆಂದು ಎಡರಂಗ ಮತ್ತು ಐಕ್ಯರಂಗವು  ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿವೆ.  ಎಡರಂಗದ ಚುನಾ ವಣಾ ಪ್ರಣಾಳಿಕೆಯನ್ನು ಕಲ್ಲಿಕೋಟೆ ಯಲ್ಲಿ ಇಂದು ಬೆಳಿಗ್ಗೆ ನಡೆದ ಎಡರಂಗ ಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಿಡುಗಡೆಗೊಳಿಸಿದರು. ಯುಡಿಎಫ್ ಚುನಾವಣಾ ಪ್ರಣಾಳಿಕೆ ಯನ್ನು ಕೊಚ್ಚಿಯಲ್ಲಿ ಇಂದು ಬೆಳಿಗ್ಗೆ ನಡೆದ ಯುಡಿಎಫ್ ಸಭೆಯಲ್ಲಿ ತೆಲಂಗಾನ ಮುಖ್ಯಮಂತ್ರಿ ರೇವಂತ ರೆಡ್ಡಿ ಬಿಡುಗಡೆಗೊಳಿಸಿದರು. 

ಎಡರಂಗದ ಚುನಾವಣಾ ಪ್ರಣಾಳಿ ಕೆಯಲ್ಲಿ 60 ಭರವಸೆಗಳನ್ನು ನೀಡಲಾ ಗಿದೆ. ಸಾಮಾಜಿಕ ಕಲ್ಯಾಣ ಪಿಂಚಣಿ ಯನ್ನು 3000 ರೂ.ಗೇರಿಸುವುದರ ಜೊತೆಗೆ ಕೇರಳದಲ್ಲಿ ಅಧ್ಯಯನ ಪೂರ್ತೀಕರಿಸಿದ ಎಲ್ಲರಿಗೂ ಉದ್ಯೋಗ ನೀಡಲಾಗುವುದು. ಈ ಅಧ್ಯಯನ ವರ್ಷದಲ್ಲಿ 60 ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗ ಖಾತರಿಪಡಿಸಲಾಗುವುದು.  ಮಹಿಳೆಯರಿಗಾಗಿ ಶೇ.೫೦ರಷ್ಟು  ಉದ್ಯೋಗ ಮೀಸಲಿರಿಸಲಾಗುವುದು, ಶಬರಿಮಲೆ ಮಾಸ್ಟರ್ ಪ್ಲಾನ್‌ನ್ನು  ಐದು ವರ್ಷದೊಳಗಾಗಿ ಪೂರ್ತೀಕರಿಸ ಲಾಗುವುದು, ಕಾಸರಗೋಡು ಕುಟ್ಟನಾಡ್, ವಯನಾಡ್ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಘೋಷಿಸಲಾದ ವಿಶೇಷ ಪ್ಯಾಕೇಜ್‌ಗಳು ಇನ್ನೂ ಮುಂದುವರಿಯಲಿದೆಯೆಂಬ ಭರವಸೆಯನ್ನು ಎಡರಂಗದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ಸಾಮಾಜಿಕ ಕಲ್ಯಾಣ ಪಿಂಚಣಿ ಯನ್ನು 3000 ರೂ.ಗೇರಿಸುವುದರ ಜೊತೆಗೆ ಶಬರಿಮಲೆ ಆಚಾರ ಸಂರಕ್ಷಣೆಗಾಗಿ ವಿಶೇಷ ಕಾನೂನನ್ನು  ಜ್ಯಾರಿಗೊಳಿಸಲಾಗುವುದೆಂದು ಯುಡಿಎಫ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದೆ. ರಬ್ಬರ್ ಬೆಲೆಯನ್ನು ೩೦೦  ರೂ.ಗೇರಿಸಲಾಗುವುದು. ಆಶಾ ವರ್ಕರ್‌ಗಳ ದೈನಂದಿನ ವೇತನವನ್ನು 700 ರೂ. ಆಗಿ ಏರಿಸಲಾಗುವುದು. ಕೇರಳದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುವುದು,ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಕಾಲೇಜು ವಿದ್ಯಾರ್ಥಿಗಳಿಗೆ ತಿಂಗಳಿಗೆ 1000 ರೂ. ನೀಡ ಲಾಗುವುದು ಸೇರಿದಂತೆ  ಹಲವು ಭರವಸೆಗಳನ್ನು ಯುಡಿಎಫ್ ನೀಡಿದೆ.

You cannot copy contents of this page