ಎಲ್‌ಡಿಎಫ್‌ನ ಬೃಹತ್ ಫ್ಲೆಕ್ಸ್ ನಾಶ ಪ್ರಕರಣ: ಅಪ್ರಾಪ್ತ ಸೇರಿ ಐದು ಮಂದಿ ಸೆರೆ

ಕಾಸರಗೋಡು: ಪೊಯಿನಾಚಿ ಮೈಲಾಟಿಯ ರಾಷ್ಟ್ರೀಯ ಹೆದ್ದಾರಿ ಬದಿ ಖಾಸಗಿ ಹಿತ್ತಿಲಲ್ಲಿ ಎಡರಂಗದ ರಾಜ್ಯ ಸಮಿತಿ ಸ್ಥಾಪಿಸಿದ ಬೃಹತ್ ಫ್ಲೆಕ್ಸ್ ಬೋರ್ಡನ್ನು ನಾಶಪಡಿಸಿದ ಪ್ರಕರಣದಲ್ಲಿ ಅಪ್ರಾಪ್ತ ಸೇರಿ ಐದು ಮಂದಿಯನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಪನೆಯಾಲ್, ಚೌಕಿ, ಪೊನ್ನಂಬಾರ ನಿವಾಸಿ ಗುರುಪ್ರಸಾದ್ (28), ಚೌಕಿಯ ಹರ್ಷಿತ್ (24), ಮಿಥುನ್‌ರಾಜ್ (25), ಗುರುವಯ್ಯ (25), ಪೃಥ್ವಿರಾಜ್ (22), ಹಾಗೂ 17ರ ಹರೆಯದ ಅಪ್ರಾಪ್ತ ಸೆರೆಯಾದವರು. ಒಂದು ವಾರದ ಹಿಂದೆ ಘಟನೆ ನಡೆದಿದೆ. ಸಿಪಿಎಂ ಪನಯಾಲ್ ಲೋಕಲ್ ಕಾರ್ಯದರ್ಶಿ ಒ. ನಾರಾಯಣನ್ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಒಮ್ಮೆ ಸ್ಥಾಪಿಸಿದ ಫ್ಲೆಕ್ಸ್ ನಾಶಪಡಿಸಿದ ಹಿನ್ನೆಲೆಯಲ್ಲಿ ಮತ್ತೊಂದು ಬೋರ್ಡ್ ಸ್ಥಾಪಿಸಲಾಯಿತಾದರೂ ಅದನ್ನು ಕೂಡಾ ನಾಶಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಗೆ ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆ.ಕಾಸರಗೋಡು: ಪೊಯಿನಾಚಿ ಮೈಲಾಟಿಯ ರಾಷ್ಟ್ರೀಯ ಹೆದ್ದಾರಿ ಬದಿ ಖಾಸಗಿ ಹಿತ್ತಿಲಲ್ಲಿ ಎಡರಂಗದ ರಾಜ್ಯ ಸಮಿತಿ ಸ್ಥಾಪಿಸಿದ ಬೃಹತ್ ಫ್ಲೆಕ್ಸ್ ಬೋರ್ಡನ್ನು ನಾಶಪಡಿಸಿದ ಪ್ರಕರಣದಲ್ಲಿ ಅಪ್ರಾಪ್ತ ಸೇರಿ ಐದು ಮಂದಿಯನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಪನೆಯಾಲ್, ಚೌಕಿ, ಪೊನ್ನಂಬಾರ ನಿವಾಸಿ ಗುರುಪ್ರಸಾದ್ (28), ಚೌಕಿಯ ಹರ್ಷಿತ್ (24), ಮಿಥುನ್‌ರಾಜ್ (25), ಗುರುವಯ್ಯ (25), ಪೃಥ್ವಿರಾಜ್ (22), ಹಾಗೂ ೧೭ರ ಹರೆಯದ ಅಪ್ರಾಪ್ತ ಸೆರೆಯಾದವರು.ಒಂದು ವಾರದ ಹಿಂದೆ ಘಟನೆ ನಡೆದಿದೆ. ಸಿಪಿಎಂ ಪನಯಾಲ್ ಲೋಕಲ್ ಕಾರ್ಯದರ್ಶಿ ಒ. ನಾರಾಯಣನ್ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಒಮ್ಮೆ ಸ್ಥಾಪಿಸಿದ ಫ್ಲೆಕ್ಸ್ ನಾಶಪಡಿಸಿದ ಹಿನ್ನೆಲೆಯಲ್ಲಿ ಮತ್ತೊಂದು ಬೋರ್ಡ್ ಸ್ಥಾಪಿಸಲಾಯಿತಾದರೂ ಅದನ್ನು ಕೂಡಾ ನಾಶಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಗೆ ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆ.

You cannot copy contents of this page