ರಾಜ್ಯದ 3 ಕಡೆ ಅರಳಿದ ತಾವರೆ: ಎಡರಂಗದ ಕೋಟೆಗಳಿಗೆ ಲಗ್ಗೆ

ತಿರುವನಂತಪುರ: ರಾಜ್ಯದ ಎಡಪಕ್ಷಗಳ ಭದ್ರಕೋಟೆಗಳಲ್ಲಿ ಮೂರು ತಾವರೆ ಅರಳಿದೆ. ಎಡಪಕ್ಷಗಳ ಭದ್ರಕೋಟೆ ಎಂದು ಕರೆಸಿಕೊಂಡಿದ್ದ ಕಳಕೂಟಂ, ಚಾತನ್ನೂರ್‌ನಲ್ಲೂ, ನೇಮಂನಲ್ಲೂ ಬಿಜೆಪಿ ಜಯಗಳಿಸಿ ರಾಜ್ಯದ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ರಾಜ್ಯದ ಇತರ ಆರು ಮಂಡಲಗಳಲ್ಲಿ ದ್ವಿತೀಯ ಸ್ಥಾನಕ್ಕೆ ತಲುಪಲು ಬಿಜೆಪಿಗೆ ಸಾಧ್ಯವಾಗಿದೆ. ನೇಮಂನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸಿಪಿಎಂ ಮುಖಂಡ, ಸಚಿವರಾಗಿರುವ ವಿ. ಶಿವನ್ ಕುಟ್ಟಿಯವರನ್ನು ಸೋಲಿಸಿ ಮಂಡಲ ವನ್ನು ಮತ್ತೆ ವಶಪಡಿಸಿದ್ದಾರೆ.

ಕಳಕೂಟಂನಲ್ಲಿ ಸಿಪಿಎಂ ಮುಖಂಡ, ಮಾಜಿ ಸಚಿವ ಕಡಗಂಪಳ್ಳಿ ಸುರೇಂದ್ರನ್‌ರನ್ನು ಸೋಲಿಸಿ ಬಿಜೆಪಿಯ ವಿ. ಮುರಳೀಧರನ್ ಜಯಗಳಿಸಿದ್ದಾರೆ. ಚಾತನ್ನೂರಿನಲ್ಲಿ ಬಿಜೆಪಿಯ ಬಿ.ಬಿ. ಗೋಪ ಕುಮಾರ್ ಬಿಜೆಪಿಗೆ ಅನಿರೀಕ್ಷಿತ ಜಯ ಗಳಿಸಿಕೊಟ್ಟಿದ್ದಾರೆ. ಇಲ್ಲಿ ಸಿಪಿಐಯ ರಾಜ್ಯ ಎಕ್ಸಿಕ್ಯೂಟಿವ್ ಸದಸ್ಯ ಆರ್. ರಾಜೇಂದ್ರನ್ ಪರಾಭವಗೊಂಡಿದ್ದಾರೆ. ಬಿಜೆಪಿ ಜಯಗಳಿಸಿದ ಮೂರು ಸೀಟುಗಳು ಎಲ್‌ಡಿಎಫ್‌ನ ಸಿಟ್ಟಿಂಗ್ ಸೀಟಾಗಿತ್ತು. ಪಾಲಕ್ಕಾಡ್, ಮಲಂಬುಳ, ಆಟಿಂಗಲ್, ಕಾಸರಗೋಡು, ಮಂಜೇಶ್ವರ, ತಿರುವಲ್ಲ ಮಂಡಲಗಳಲ್ಲಿ ಬಿಜೆಪಿ ದ್ವಿತೀಯ ಸ್ಥಾನಕ್ಕೆ ತಲುಪಿದೆ.

RELATED NEWS

You cannot copy contents of this page