ಎಡನೀರು: ಎಡನೀರು ಮಠದಲ್ಲಿ ನಿನ್ನೆ ಅಪರಾಹ್ನ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಇವರ ಉಪಸ್ಥಿತಿ ಯಲ್ಲಿ ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿಯವರಿಂದ ಮಹಾ ಶ್ರೀಚಕ್ರ ನವಾವರಣ ಪೂಜೆ ಜರಗಿತು. ಈ ವೇಳೆ ವಿದುಷಿ ಎನ್.ಜೆ. ನಂದಿನಿ ಮತ್ತು ಬಳಗದವರಿಂದ ನವಾವರಣ ಕೃತಿ ಆಲಾಪನೆ ಜರಗಿತು. ವಯಲಿನ್ನಲ್ಲಿ ವಿದ್ವಾನ್ ವಿಠಲರಾಮಮೂರ್ತಿ ಚೆನ್ನೈ, ಮೃದಂಗದಲ್ಲಿ ಆನೂರು ಅನಂತಕೃಷ್ಣ ಶರ್ಮ ಬೆಂಗಳೂರು, ಮೋರ್ಸಿಂಗ್ನಲ್ಲಿ ಪಯ್ಯನ್ನೂರು ಗೋವಿಂದ ಪ್ರಸಾದ್ ಸಹಕರಿಸಿದರು.







