ಮಳ್ಳಂಗೈ ನಿವಾಸಿ ಸೌದಿ ಅರೇಬಿಯಾದಲ್ಲಿ ಕುಸಿದುಬಿದ್ದು ಮೃತ್ಯು

ಕುಂಬಳೆ: ಬಂದ್ಯೋಡು ಮಳ್ಳಂಗೈ ನಿವಾಸಿ ಸೌದಿ ಅರೇಬಿ ಯಾದಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕಳೆದ 22 ವರ್ಷಗಳಿಂದ ಸೌದಿ ಅರೇಬಿಯಾದ ಅಬಹದಲ್ಲಿ ಕಫ್ತೀರಿಯ ನಡೆಸುತ್ತಿದ್ದ  ಮುಹಮ್ಮದ್ ಫಾರೂಕ್ (48) ಎಂಬವರು ಮೃತಪಟ್ಟ ವ್ಯಕ್ತಿಯಾಗಿ ದ್ದಾರೆ. ನಿನ್ನೆ ಸಂಜೆ ಕಫ್ತೀರಿಯದಲ್ಲಿ ಕುಸಿದುಬಿದ್ದು ಮೃತಪಟ್ಟಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಮೃತದೇಹವನ್ನು  ಊರಿಗೆ ತರಲು ಸಿದ್ದತೆ ನಡೆಯುತ್ತಿದೆ.  ಇತ್ತೀಚೆಗೆ   ಊರಿಗೆ ಬಂದಿದ್ದ ಮುಹಮ್ಮದ್ ಫಾರೂಕ್ ಈದುಲ್ ಫಿತೃ ಹಬ್ಬದ ಬಳಿಕ ಮರಳಿದ್ದರು. 

ದಿ|  ಮುಹಮ್ಮದ್ ಹಾಜಿ-ಆಯಿಷ ಹಜ್ಜುಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ಖೈರುನ್ನೀಸ ಮಕ್ಕಳಾದ ಫಾಹಿಕ್, ಫಲಕ್, ಉರೈಕ್, ಇಮಾದ್, ಸಹೋದರ-ಸಹೋದರಿಯರಾದ ಮೊಯ್ದೀನ್, ಮುಸ್ತಾಕ್, ಇಬ್ರಾಹಿಂ, ನಫೀಸ, ಖದೀಜ, ಸುಹರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page