ಅಪರಿಮಿತವಾಗಿ ನೋವು ನಿವಾರಕ ಮಾತ್ರೆ ಸೇವಿಸಿ ವ್ಯಕ್ತಿ ಮೃತ್ಯು

ಪೆರ್ಲ: ನೋವು ನಿವಾರಕ ಮಾತ್ರೆಗಳನ್ನು ಅಪರಿಮಿತವಾಗಿ ಸೇವಿಸಿ ತೀವ್ರ ಅಸ್ವಸ್ಥಗೊಂಡು ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.

ಬಜಕೂಡ್ಲು ನಿವಾಸಿ ಮುಂಡಪ್ಪ ರೈ (59) ಮೃತಪಟ್ಟ ವ್ಯಕ್ತಿಯಾಗಿ ದ್ದಾರೆ. ಮಾನಸಿಕವಾಗಿ ಅಸ್ವಸ್ಥರಾಗಿದ್ದ ಇವರು ಚಿಕಿತ್ಸೆಯಲ್ಲಿದ್ದರೆನ್ನಲಾಗಿದೆ. ಈ ಮಧ್ಯೆ ಮೊನ್ನೆ ಅಪರಿಮಿತವಾಗಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾU ಲಿಲ್ಲ. ಮೃತರು ಪತ್ನಿ ಪದ್ಮಾವತಿ, ಮಕ್ಕಳಾದ ಸುಪ್ರೀತ, ಸುಜಿತ್ (ಗಲ್ಫ್), ಸಹೋದರ- ಸಹೋದರಿಯರಾದ ಶಾಂತರಾಂ ರೈ, ಸಂಕಪ್ಪ ರೈ, ವಿಠಲ ರೈ, ಶೀಲಾವತಿ, ಶಾರದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page