ವ್ಯಕ್ತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ವ್ಯಕ್ತಿಯೊಬ್ಬರು ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೀರಂತಬೈಲು ಬೂತಗುಡಿ ನಿವಾಸಿ ದಿ| ಬಾಬು ನಾಕ್‌ರ ಪುತ್ರ ಬಿ. ಪ್ರಕಾಶ್ (೪೮) ಮೃತಪಟ್ಟ ವ್ಯಕ್ತಿ. ಇವರು ಕೂಲಿ ಕಾರ್ಮಿಕನಾಗಿದ್ದರು. ನಿನ್ನೆ ರಾತ್ರಿ ಮನೆಯವರು ಅಡ್ಕತ್ತಬೈಲು ಬೈದರ್ಕಳ ನೇಮೋತ್ಸವಕ್ಕೆ ತೆರಳಿದ್ದರು. ಈ ವೇಳೆ ಪ್ರಕಾಶ್ ಮಾತ್ರವೇ ಮನೆಯಲ್ಲಿದ್ದರು. ರಾತ್ರಿ ೧೨ ಗಂಟೆ ವೇಳೆ ಮನೆಯವರು ಮರಳಿದಾಗ ಮನೆ ಹಿಂಭಾಗದ ಮರದಲ್ಲಿ ಪ್ರಕಾಶ್ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.  ಮೃತರು ತಾಯಿ ಲೀಲಾವತಿ, ಪತ್ನಿ ಪ್ರಿಯ, ಪುತ್ರ ಧನ್ವಿತ್, ಸಹೋದರ-ಸಹೋದರಿಯ ರಾದ ಚಂದ್ರಶೇಖರ, ಪುರುಷೋತ್ತಮ, ರಾಜೇಶ್, ವಿಶಾಲಾಕ್ಷಿ, ಪದ್ಮಾವತಿ, ಚಂದ್ರಾವತಿ, ಪ್ರಮೀಳ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page