ಯುವಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಪಟಾಕಿ ಸ್ಫೋಟ: ಗಂಭೀರ ಗಾಯಗೊಂಡ ಯುವಕ ಚಿಕಿತ್ಸೆಯಲ್ಲಿ; ಸ್ನೇಹಿತನ ವಿರುದ್ಧ ಕೇಸು 

ಬದಿಯಡ್ಕ: ಯುವಕನನ್ನು ಕೊಠಡಿಯೊಳಗೆ ಕೂಡಿ ಹಾಕಿದ ಬಳಿಕ ಮಾಲೆ ಪಟಾಕಿ ಸ್ಫೋಟಿಸಿದ್ದು, ಇದರಿಂದ ಯುವಕ ಗಂಭೀರ ಗಾಯಗೊಂಡಿರುವುದಾಗಿ ದೂರಲಾಗಿದೆ. ಮಲ್ಲ ಚೋಕೆಮೂಲೆ ನಿವಾಸಿಯಾದ ಎಂ.ಅಭಿಲಾಷ್ (32) ಗಂಭೀರ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಘಟನೆಗೆ ಸಂಬಂಧಿಸಿ ಅಭಿಲಾಷ್ ನೀಡಿದ ದೂರಿನಂತೆ ಸ್ನೇಹಿತನಾದ ಮುಳ್ಳೇರಿಯದ ಪ್ರಣವ್ ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.

ಎಪ್ರಿಲ್ 15ರಂದು ರಾತ್ರಿ 10 ಗಂಟೆಯಿಂದ 16ರಂದು ಬೆಳಿಗ್ಗೆ 8 ಗಂಟೆ ಮಧ್ಯೆ ಅಭಿಲಾಷ್‌ರನ್ನು ಮನೆಯೊಂದರ ಕೊಠಡಿಯೊಳಗೆ ಕೂಡಿ ಹಾಕಿದ ಬಳಿಕ ಅವರ ಸಮೀಪಕ್ಕೆ  ಮಾಲೆ ಪಟಾಕಿ ಹಚ್ಚಿ  ಎಸೆದಿರುವುದಾಗಿ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.

You cannot copy contents of this page