ಕಾಸರಗೋಡು: ಮದುವೆ ನಿಶ್ಚಿತಾರ್ಥ ನಡೆದ ಯುವಕ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆಯಿಂದ ಮನನೊಂದಿದ್ದ ಯುವತಿ ಮನೆಯೊಳಗೆ ಫ್ಯಾನ್‌ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಕಿದೂರು ಕುಂಟಂಗೇರಡ್ಕದ ಬಿ. ಜಯಾನಂದರ ಪುತ್ರಿ ಪ್ರಪುಲ್ಲ (26) ಸಾವಿಗೀಡಾದ ಯುವತಿ ಯಾಗಿದ್ದಾಳೆ. ನಿನ್ನೆ ಸಂಜೆ ವೇಳೆ ಈಕೆಯ ಮೃತದೇಹ ಮನೆ ಯೊಳಗೆ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ವೇಳೆ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಮನೆಯವರು ಜಯ ನಂದರ ಸಹೋದರಿಯ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಈ ವೇಳೆ ಪ್ರಫುಲ್ಲ ಮಾತ್ರವೇ ಮನೆಯಲ್ಲಿದ್ದಳು. ನಿನ್ನೆ ಸಂಜೆ ಮನೆಯವರು ಮನೆಗೆ ಮರಳಿದಾಗಲೇ ಮೃತದೇಹ ಕಂಡುಬಂದಿದೆ.
ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹದ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ.
ತಮಿಳುನಾಡು ನಿವಾಸಿ ಬ್ಯಾಂಕ್ ನೌಕರನಾದ ಮಣಿ ಹಾಗೂ ಪ್ರಫುಲ್ಲರ ಮದುವೆ ನಿಶ್ಚಿತಾರ್ಥ ನಾಲ್ಕು ತಿಂಗಳ ಹಿಂದೆ ನಡೆಸಲಾಗಿತ್ತು. ಮಳೆಗಾಲ ಮುಗಿದ ಬಳಿಕ ಮದುವೆ ನಡೆಸಲು ಎರಡೂ ಮನೆಯವರು ನಿರ್ಧರಿಸಿ ದ್ದರು. ಈಮಧ್ಯೆ ಒಂದು ತಿಂಗಳ ಹಿಂದೆ ಮಣಿ ಚಲಾಯಿಸಿದ ಬೈಕ್ ಹಾಗೂ ಬೇರೊಂದು ಬೈಕ್ ಢಿಕ್ಕಿ ಹೊಡೆದು ಅಪಘಾತವುಂ ಟಾಗಿತ್ತು. ಇದರಿಂದ ಗಂಭೀರ ಗಾಯಗೊಂಡ ಮಣಿ ಹತ್ತು ದಿನಗಳ ಕಾಲ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದು ಬಳಿಕ ಮೃತಪಟ್ಟಿದ್ದರು. ಮಣಿಯ ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ ಪ್ರಫುಲ್ಲ ಹಾಗೂ ಕುಟುಂಬ ಭಾಗವಹಿಸಿದ್ದರು. ಅಲ್ಲಿಂದ ಅವರು ಮರಳಿದ ಬಳಿಕ ಪ್ರಫುಲ್ಲ ಮಾನಸಿಕವಾಗಿ ತೀವ್ರ ನೊಂದಿದ್ದಳೆನ್ನಲಾಗಿದೆ. ಇದೇ ಕಾರಣದಿಂದ ಈಕೆ ನೇಣು ಬಿಗಿದು ಸಾವಿಗೀಡಾಗಿರಬಹುದೆಂದು ಸಂಶ ಯಿಸಲಾಗಿದೆಯೆಂದು ಸಂಬಂಧಿಕರು ತಿಳಿಸಿದ್ದಾರೆ.
ಇದೇ ವೇಳೆ ಪ್ರಫುಲ್ಲ ಸಾವಿಗೆ ಶರಣಾಗುವಮೊದಲು ಬರೆದಿಟ್ಟ ಪತ್ರ ವೊಂದು ಮನೆಯಲ್ಲಿ ಪತ್ತೆಯಾಗಿದೆ. ಅದರಲ್ಲಿ ‘ತನ್ನೊಂದಿಗೆ ಮದುವೆ ನಿಶ್ಚಿತಾರ್ಥ ನಡೆದ ಮಣಿಯ ಸಾವಿನ ದುಃಖ ಸಹಿಸಲಾ ಗುತ್ತಿಲ್ಲ. ತನ್ನ ಮೃತದೇಹವನ್ನು ಅವರ ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲೇ ನಡೆಸಬೇಕು’ ಎಂದು ಬರೆಯ ಲಾಗಿದೆ. ಈ ವಿಷಯದಲ್ಲಿ ಎರಡೂ ಮನೆಯವರು ಒಮ್ಮತದ ನಿರ್ಧಾರ ಕೈಗೊಂಡಿರುವುದಾಗಿ ಪ್ರಫುಲ್ಲರ ಸಂಬಂಧಿಕರು ತಿಳಿಸಿದ್ದಾರೆ. ಆದ್ದರಿಂದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ತಮಿಳು ನಾಡಿಗೆ ಕೊಂಡೊಯ್ಯುವುದಾಗಿ ಸಂಬಂಧಿಕರು ತಿಳಿಸಿದ್ದಾರೆ.
ಪ್ರಫುಲ್ಲರ ಸಾವಿನಿಂದ ಕುಟುಂಬ ಹಾಗೂ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಸಾವಿಗೆ ಸಂಬಂಧಿಸಿ ಕುಂಬಳೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿ ಸಿಕೊಂಡಿದ್ದಾರೆ. ಪ್ರಫುಲ್ಲರ ಆತ್ಮಹತ್ಯೆ ಬಗ್ಗೆ ಬರೆದಿಟ್ಟ ಪತ್ರ ಹಾಗೂ ಫೋನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಮೃತಳು ತಂದೆ, ತಾಯಿ ದೇವಿ,ಸಹೋದರ ಪ್ರಮೋದ್ ಕುಮಾರ್,ಸಹೋದರಿ ಪ್ರಮೋದಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ
ದ್ದಾಳೆ.






