ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವ ಜನಪ್ರಿಯ ನಾಯಕ

ದೆಹಲಿ: ಜಾಗತಿಕ ಜನಪ್ರಿಯ ಪ್ರಜಾಪ್ರಭುತ್ವ ಮುಖಂಡನಾಗಿ  ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಯುಎಸ್ ಡಾಟಾ ಅನಲಿಸ್ಟ್ ಸಂಸ್ಥೆಯಾದ ಮೋನಿಟಿಂಗ್ ಕನ್ಸಲ್ಟ್ ನಡೆಸಿದ ವಿಶ್ವಸಮೀಕ್ಷೆಯಲ್ಲಿ ಆಯ್ಕೆ ಮಾಡಲಾಗಿದೆ. ಸಮೀಕ್ಷೆಯಲ್ಲಿ ಮೋದಿಗೆ 68 ಶೇಕಡಾ ರೇಟಿಂಗ್ ಲಭಿಸಿದೆ. ಭಾಗವಹಿಸಿದ 26 ಶೇಕಡಾ ಮಂದಿ  ಮೋದಿಗೆ ವಿರೋಧವಾಗಿ ಪ್ರತಿಕ್ರಿಯಿಸಿದ್ದಾರೆ. 6 ಶೇಕಡಾ ಮಂದಿ ಅಭಿಪ್ರಾಯ ಪ್ರಕಟಿಸಿಲ್ಲ. ಈ ತಿಂಗಳ 2ರಿಂದ 8ರ ಮಧ್ಯೆಗಿನ ಸಮಯದಲ್ಲಿ ಸಮೀಕ್ಷೆ ನಡೆಸಲಾಗಿದೆ.

ಸ್ವಿಝರ್‌ಲ್ಯಾಂಡ್ ಅಧ್ಯಕ್ಷ ಗೈಪಾರ್ಮಲ್, ದಕ್ಷಿಣ ಕೊರಿಯ ಅಧ್ಯಕ್ಷ ಲಿಜಯ್ ಮ್ಯೂಂಗ್ ಎಂಬಿವರು ೨ನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರಿಗೆ 62 ಶೇಕಡಾ ರೇಟಿಂಗ್ ಲಭಿಸಿದೆ. ಚೆಕ್ ರಿಪಬ್ಲಿಕ್‌ನ ಡ್ರಜ್ ಬಾಬಿಸ್‌ರಿಗೆ 57 ಶೇಕಡಾ, ಅರ್ಜೆಂಟೀನಾದ ಜಾವಿಯಾರ್ ಮಿಲೇಕ್‌ರಿಗೆ 56 ಶೇ, ಜಪಾನ್‌ನ ಸನೆ ತಕಾಯಿಚ್ಚಿಯವರಿಗೆ 56 ಶೇ, ಕೆನಡಾದ ಮಾರ್ಕ್ ಕಾಣಿಕ್‌ರಿಗೆ 55 ಶೇ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ 39 ಶೇ, ಯುಕೆ ಅಧ್ಯಕ್ಷ ಕೇರ್ ಸ್ಟಾರ್ಮರ್‌ರಿಗೆ 24 ಶೇ, ಫ್ರೆಂಚ್ ಅಧ್ಯಕ್ಷ ಇಮಾನ್ಯುವೆಲ್ ಮಾಕ್ರೋನಿಯವರಿಗೆ 17 ಶೇ. ರೇಟಿಂಗ್ ಲಭಿಸಿದೆ.

RELATED NEWS

You cannot copy contents of this page