ಮಂಜೇಶ್ವರ: ಉದ್ಯಾವರ ಮಾಡದಲ್ಲಿರುವ ಶ್ರೀ ಅರಸುಕೃಪಾ ಜೈ ವೀರಮಾರುತಿ ವ್ಯಾಯಾಮ ಶಾಲೆಯಿಂದ ಕಳವು ನಡೆದಿದೆ. ನಿನ್ನೆ ರಾತ್ರಿ ವ್ಯಾಯಾಮ ಶಾಲೆಯ ಬಾಗಿಲು ಮುರಿದು ಕಳ್ಳರು ಒಳಗೆ ನುಗ್ಗಿ ಕಳವು ನಡೆಸಿರುವುದಾಗಿ ತಿಳಿದು ಬಂದಿದೆ. ವ್ಯಾಯಾಮ ಶಾಲೆಯೊ ಳಗಿದ್ದ ಕಾಣಿಕೆ ಹುಂಡಿಯನ್ನು ಕಳವು ನಡೆಸಿದ ಕಳ್ಳರು ಬಳಿಕ ಅದರಿಂದ ಹಣವನ್ನು ದೋಚಿ ದ್ದಾರೆ. ಪಾತ್ರೆ ಸಮೀಪದ ಪೊದೆಯೊ ಳಗೆ ಪತ್ತೆಯಾಗಿದೆ. ಇದರಲ್ಲಿ ಸುಮಾರು ೫೦೦೦ ರೂಪಾಯಿಗಳಿದ್ದಿರಬ ಹುದೆಂದು ಅಂದಾಜಿಸಲಾಗಿದೆ. ಇಂದು ಬೆಳಿಗ್ಗೆ ವ್ಯಾಯಾಮ ಶಾಲೆಯ ಪದಾಧಿಕಾರಿಗಳು ಅಲ್ಲಿಗೆ ತಲುಪಿದಾಗಲೇ ಕಳವು ನಡೆದ ವಿಷಯ ಅರಿವಿಗೆ ಬಂದಿದೆ. ಈಬಗ್ಗೆ ವ್ಯಾಯಾಮ ಶಾಲೆ ಅಧ್ಯಕ್ಷ ಸದಾನಂದ ಹತ್ತನೇ ಮೈಲು ಅವರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ವೇಳೆ ವ್ಯಾಯಾಮ ಶಾಲೆಯ ಸಿಸಿ ಕ್ಯಾಮರಾದಲ್ಲಿ ಕಳ್ಳರ ದೃಶ್ಯಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.






