ಎರಡು ಮಕ್ಕಳ ತಾಯಿ ನಾಪತ್ತೆ

ಕಾಸರಗೋಡು: ಇಬ್ಬರು ಮಕ್ಕಳ ತಾಯಿಯಾಗಿರುವ ಯುವತಿ ನಾಪತ್ತೆಯಾದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ.

ಕರ್ನಾಟಕದ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರು ನಿವಾಸಿ ರತ್ನ (30) ನಾಪತ್ತೆಯಾದ ಯುವತಿ. ಈಬಗ್ಗೆ ಆಕೆಯ ಪತಿ ದೇವಪ್ಪ ನೀಡಿದ ದೂರಿನಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ವಲಸೆ ಕಾರ್ಮಿಕನಾಗಿರುವ  ಈ ದಂಪತಿ ಚೆರ್ಕಳದ ಕ್ವಾರ್ಟರ್ಸ್ ವೊಂದರಲ್ಲಿ ವಾಸಿಸುತ್ತಿದ್ದರು. ಮೇ 2ರಂದು ರತ್ನ ಕ್ವಾರ್ಟರ್ಸ್‌ನಿಂದ ಹೊರ ಹೋದವರು ನಂತರ ನಾಪತ್ತೆ ಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page