ನೀಟ್ ಪರೀಕ್ಷೆ ಅವ್ಯವಹಾರ ಪ್ರತಿಭಟಿಸಿ ಎಂಎಸ್‌ಎಫ್ ಮಾರ್ಚ್: 15 ಮಂದಿ ವಿರುದ್ಧ ಕೇಸು, ಮೂವರ ಸೆರೆ

ಕುಂಬಳೆ:  ನೀಟ್ ಯುಜಿ ಪರೀಕ್ಷೆಯಲ್ಲಿ ನಡೆದ ಅವ್ಯವಹಾ ರವನ್ನು ಪ್ರತಿಭಟಿಸಿ ಎಂಎಸ್‌ಎಫ್ ನೇತೃತ್ವದಲ್ಲಿ ನಿನ್ನೆ ಕುಂಬಳೆಯಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ೧೫ ಮಂದಿ ಎಂಎಸ್‌ಎಫ್ ಕಾರ್ಯ ಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಬಂದ್ಯೋಡು ಖಾಲಿದ್ ಮಂಜಿಲ್‌ನ ಮುಹಮ್ಮದ್  ಸುರ್ಫಾರಾಝ್ (31), ಅಂಗಡಿಮೊಗರು  ಪಳ್ಳಿಕ್ಕೆರೆ ಹೌಸ್‌ನ ಸವಾದ್ ಎಂ.ಪಿ (33) ಮತ್ತು ವರ್ಕಾಡಿ ಧರ್ಮನಗರ ಹೌಸ್‌ನ ಮುಹಮ್ಮದ್ ಅನ್ಸಾರ್ ಡಿ (25) ಎಂಬವರನ್ನು ಪೊಲೀಸರು ಬಂಧಿಸಿ ದ್ದಾರೆ. ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ರಸ್ತೆ ತಡೆಯೊಡ್ಡಿ ಸಾರಿಗೆ  ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಸೃಷ್ಟಿಸಿದ ಆರೋಪದಂತೆ ೧೫ ಮಂದಿ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You cannot copy contents of this page