ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನಲ್ಲಿ ಈ ಭಾರಿ ಮುಸ್ಲಿಂಲೀಗ್ ಅಧಿಕಾರಕ್ಕೇರಿದೆ. ಒಟ್ಟು 24 ವಾರ್ಡ್ಗಳನ್ನು ಹೊಂದಿದ್ದು, 19 ಮುಸ್ಲಿಂಲೀಗ್, 3 ಬಿಜೆಪಿ, 2 ಎಲ್.ಡಿ.ಎಫ್ ಸದಸ್ಯರನ್ನು ಹೊಂ ದಿದೆ. ನೂತನ ಅಧ್ಯಕ್ಷರಾಗಿ 2ನೇ ವಾರ್ಡ್ ಸದಸ್ಯ, ಯೂತ್ ಲೀಗ್ ಜಿಲ್ಲಾ ಕಾರ್ಯದರ್ಶಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ಅಬ್ದುಲ್ ರಹಿಮಾನ್, ಉಪಾಧ್ಯಾಕ್ಷ ರಾಗಿ 24ನೇ ವಾರ್ಡ್ನಲ್ಲಿ ಅವಿರೋ ಧವಾಗಿ ಆಯ್ಕೆಗೊಂಡ ಮಾಜಿ ಬ್ಲೋಕ್ ಪಂಚಾಯತ್ ಅಧ್ಯಕೆÀ್ಷ ಸಮೀನ ಟೀಚರ್ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷರು ಹಾಗೂ ಉಪಾಧ್ಯಾಕ್ಷರಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗೋಲ್ಡನ್ ಅಬ್ದುಲ್‌ರಹಿಮಾನ್, ಉಪಾಧ್ಯಾಕ್ಷ ಸ್ಥಾನಕ್ಕೆ ಸಮೀನ ಟೀಚರ್ ಸ್ಪರ್ಧಿಸಿದ್ದು, ತಲಾ 19 ಮತಗಳು, ಬಿಜೆಪಿಯ ವಸಂತ ಮಯ್ಯ, ಸಾಕ್ಷಿ ಇವರಿಗೆ ತಲಾ 3ಮತಗಳು ಲಭಿಸಿದ್ದು, ಎಲ್.ಡಿ.ಎಫ್‌ನ ಇಬ್ಬರು ಸದಸ್ಯರ ಮತ ಅಸಿಂಧುಗೊAಡಿದೆ. ಪಂಚಾಯತ್‌ಗೆ ನೂತನ ಕಟ್ಟಡ ನಿರ್ಮಾಣ, ಸಂಪೂರ್ಣವಾಗಿ ಮಾಲಿನ್ಯ ರಹಿತ ಪಂಚಾಯತ್‌ನ್ನು ಮಾಡುವ ಗುರಿ, ಆರೋಗ್ಯ ಹಾಗೂ ವಿದ್ಯಾಭ್ಯಾಸ ರಂಗದಲ್ಲಿ ಉನ್ನತ ಮಟ್ಟದ ಅಭಿವೃದ್ದಿಗೊಳಿಸುವುದು ಮೊದಲ ಆದ್ಯತೆ ಎಂದು ಪಂಚಾಯತ್‌ನ ನೂತನ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ತಿಳಿಸಿದ್ದಾರೆ.
ವರ್ಕಾಡಿ: ವರ್ಕಾಡಿ ಪಂಚಾಯತ್‌ನಲ್ಲಿ ಆಡಳಿತ ಯು.ಡಿ.ಎಫ್‌ಗೆ ಲಭಿಸಿದೆ. ಅಧ್ಯಕ್ಷರಾಗಿ 10ನೇ ವಾರ್ಡ್ ಕಾಂಗ್ರೆಸ್ ಸದಸ್ಯ ಉಮ್ಮರ್ ಬೋರ್ಕಳ, 13ನೇ ವಾರ್ಡ್ ಲೀಗ್ ಸದಸ್ಯೆ ಫಾತಿಮ್ಮತ್ ನಸೀಮ ಉಪಾಧ್ಯಾಕ್ಷರಾಗಿ ಆಯ್ಕೆಗೊಂಡಿದ್ದಾರೆ. ಪಂಚಾಯತ್ ಒಟ್ಟು 18 ವಾರ್ಡ್ನ್ನು ಹೊಂದಿದ್ದು, (6 ಕಾಂಗ್ರೆಸ್, 4 ಲೀಗ್), 2 ಬಿಜೆಪಿ, 6 ಎಡರಂಗ ಸದಸ್ಯರಿದ್ದಾರೆ. ಅಧ್ಯಕ್ಷರು ಹಾಗೂ ಉಪಾzs್ಯÀಕ್ಷರಿಗೆ ನಡೆದ ಚುನಾವಣೆಯಲ್ಲಿ ಯುಡಿಎಫ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಉಮ್ಮರ್ ಬೋರ್ಕಳ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಫಾತಿಮತ್ ನಸೀಮರಿಗೆ ತಲಾ 10 ಮತಗಳು, ಎಡರಂಗದ ಗೀತಾ ಸಾಮಾನಿ ಹಾಗೂ ಪೂರ್ಣಿಮ ಬೆರಿಂಜ ಸ್ಪರ್ಧಿಸಿದ್ದು ಇವರಿಗೆ ತಲಾ 6ಮತಗಳು ಲಭಿಸಿದೆ. ಇಬ್ಬರು ಬಿಜೆಪಿ ಸದಸ್ಯರು ತಟಸ್ಥರಾಗಿದ್ದರು.







