ಮಂಗಲ್ಪಾಡಿ: ಪುಳಿಕುತ್ತಿ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಇಂದಿನಿAದ ಈ ತಿಂಗಳ 28ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಭಂಡಾರ ಮನೆಯಲ್ಲಿ ಶ್ರಿ ಗುಳಿಗ ದೈವದ ಕೋಲ ನಡೆಯಿತು. 2ರಿಂದ ಶ್ರೀ ಕೊರತಿ ದೈವದ ಕೋಲ, ಸಂಜೆ 6.30ಕ್ಕೆ ಶ್ರೀ ದೈವಗಳ ಭಂಡಾರ ಆಗಮನ, ರಾತ್ರಿ 7ಕ್ಕೆ ಸ್ಥಳೀಯ ಮಕ್ಕಳಿಂದ ನೃತ್ಯ, 7.30ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಂದಾಳು ಎಂ.ಕೆ ಅಶೋಕ್ ಕುಮಾರ್ ಹೊಳ್ಳ ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಮುಂದಾಳು ಕೃಷ್ಣ ಶಿವಕೃಪ ಕುಂಜತ್ತೂರು ಧಾರ್ಮಿಕ ಭಾಷಣ ಮಾಡುವರು. ಗುರಿಕಾರ ರಾಮಕೃಷ್ಣ ಪುಳಿಕುತ್ತಿ, ಕರ್ನಾಟಕ ಸರಕಾರ ಮಾಜಿ ಸಚಿವ ಅಂಗಾರ, ವಿಶ್ವಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ, ಉದ್ಯಮಿ ಮೋಹನ್ ಶೆಟ್ಟಿ ತೂಮಿನಾಡು, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಶಶಿಧರ ಪೂಂಜಾ ಕೊಂಡೆವೂರು, ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ, ಪಂ. ಸದಸ್ಯ ವಸಂತ ಕುಮಾರ್ ಮಯ್ಯ, ಶಶಿಧರ ಶೆಟ್ಟಿ, ಮಾಜಿ ಸದಸ್ಯೆ ಸುಧಾ ಗಣೇಶ್, ಮನೋಜ್ ಕುಮಾರ್ ಉಪಸ್ಥಿತರಿರುವರು. ರಾತ್ರಿ ಅನ್ನಸಂತರ್ಪಣೆ, 9.30ರಿಂದ ಕೊರಗ ತನಿಯ, ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ದೈವದ ನೇಮೋತ್ಸವ, 27ರಂದು ಸಂಜೆ 7ರಿಂದ ಭಕ್ತಿಗಾನ ಪ್ರವಾಹ, ನೃತ್ಯ ಕಾರ್ಯಕ್ರಮ, ಅನ್ನಸಂತರ್ಪಣೆ, ರಾತ್ರಿ 11ರಿಂದ ಮಹಾಕಾಳಿ ದೈವದ ನೇಮೋತ್ಸವ, 28ರಂದು ಸಂಜೆ 6.30ರಿಂದ ಕುಣಿತ ಭಜನೆ, ರಾತ್ರಿ 7.30ರಿಂದ ನೃತ್ಯ, ಅನ್ನಸಂತರ್ಪಣೆ, 10.30ರಿಂದ ಐಲ ಬ್ರಹ್ಮಶ್ರೀ ಮೊಗೇರ ನೇಮೋತ್ಸವ, 12ರಿಂದ ಶ್ರೀ ತನ್ನಿಮಾನಿಗ ದೈವ ಭಂಡಾರ ಮನೆಯಿಂದ ಉತ್ಸವಾಂಗಣಕ್ಕೆ ಆಗಮನ, ಮರುದಿನ ಬೆಳಿಗ್ಗೆ 5ಕ್ಕೆ ಭಂಡಾರ ಇಳಿಯುವುದು ನಡೆಯಲಿದೆ.






