ಹೊಯ್ಗೆ ಸಂಗ್ರಹಿಸುತ್ತಿದ್ದ ವೇಳೆ  ಪೊಲೀಸರನ್ನು ಕಂಡು ಪರಾರಿಯಾದ ಟಿಪ್ಪರ್ ಲಾರಿ ಮಾಲಕ ಸೆರೆ

ಕುಂಬಳೆ: ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸುತ್ತಿದ್ದ ವೇಳೆ ಪೊಲೀಸರನ್ನು ಕಂಡು ಟಿಪ್ಪರ್ ಲಾರಿ ಹಾಗೂ ಹೊಯ್ಗೆ ಸಂಗ್ರಹ ಉಪಕರಣಗಳನ್ನು ಉಪೇಕ್ಷಿಸಿ ಪರಾರಿಯಾದ ಪ್ರಕರಣದಲ್ಲಿ ವಾಹನದ ಆರ್‌ಸಿ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಪೆರಿಯಡ್ಕದ ಎಂ. ಅಶ್ರಫ್ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಹೊಯ್ಗೆ ಲೋಡ್ ಮಾಡುವ ಕಾರ್ಮಿಕರ ಸಹಿತ ಐದು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ ಇತರ ಆರೋಪಿಗಳಾದ ಲೋಡಿಂಗ್ ಕಾರ್ಮಿಕರಿಗಾಗಿ  ಶೋಧ ಮುಂದುವರಿ ಯುತ್ತಿದೆ. ಮಾರ್ಚ್ ೩೦ರಂದು ಸಂಜೆ ಶಿರಿಯ ಹೊಳೆಯ ಹೇರೂರು ಪೈಯಾರ್‌ಕಡವಿನಲ್ಲಿ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸುತ್ತಿದ್ದ ಬಗ್ಗೆ ಮಾಹಿತಿ ಲಭಿಸಿ  ಎಸ್‌ಐಗಳಾದ ಸಿ. ಸನೀಶ್, ಅನಂತಕೃಷ್ಣ ಆರ್ ಮೆನೋನ್ ಎಂಬಿವರು ಪೊಲೀಸ್ ಜೀಪಿನಲ್ಲಿ ಸ್ಥಳಕ್ಕೆ ತಲುಪಿದ್ದರು. ಈ ವೇಳೆ  ಲಾರಿಯ ಡ್ರೈವಿಂಗ್ ಸೀಟಿನಲ್ಲಿದ್ದ ಅಶ್ರಫ್ ಹಾಗೂ ಹೊಳೆಯಿಂದ ಹೊಯ್ಗೆ ಸಂಗ್ರಹಿಸಿ ದಡಕ್ಕೆ ತಲುಪಿಸುತ್ತಿದ್ದ ನಾಲ್ವರು ಕಾರ್ಮಿಕರು ಪೊಲೀಸರನ್ನು ಕಂಡು ಓಡಿ ಪರಾರಿಯಾಗಿದ್ದರು. ಹೊಯ್ಗೆ ತುಂಬಿಸುತ್ತಿದ್ದ ಲಾರಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಬಳಿಕ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಅಶ್ರಫ್ ಸೆರೆಗೀಡಾಗಿದ್ದಾನೆ.

You cannot copy contents of this page